Asianet Suvarna News Asianet Suvarna News

ಪ್ರೇಕ್ಷಕರ ಮನ ಗೆದ್ದ 'ಪಠಾಣ್': ರಾಕಿಭಾಯ್ ದಾಖಲೆ ಮುರಿತಾರಾ ಕಿಂಗ್ ಖಾನ್?

ಚೆನ್ನಾಗಿರುವ ಸಿನಿಮಾವನ್ನು ಬಾಕ್ಸಾಫೀಸ್'ನಲ್ಲಿ ಕಟ್ಟಿ ಹಾಕೋಕೆ ಯಾರಿಂದಲೂ ಆಗಲ್ಲ ಅಂತ 'ಪಠಾಣ್' ಮತ್ತೆ ನಿರೂಪಿಸಿದೆ.

ಬಾಯ್ಕಾಟ್ ಕೂಗಿನ ನಡುವೆ ರಿಲೀಸ್ ಆದ 'ಪಠಾಣ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾಗಿ ಮೂರು ದಿನಕ್ಕೆ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕಳೆದ ನಾಲ್ಕು ವರ್ಷದ ಹಿಂದೆ ಬಾಕ್ಸಾಫೀಸ್'ನಲ್ಲಿ ಝೀರೋ ಆಗಿದ್ದ ಶಾರುಖ್ ಖಾನ್, ಇದೀಗ ಹೀರೋ ಆಗಿದ್ದಾರೆ. ಪಠಾಣ್ ಸಿನಿಮಾ ಹಿಂದಿ, ತೆಲುಗು, ತಮಿಳಿನಲ್ಲೂ ರಿಲೀಸ್ ಆಗಿದ್ದು, ಕೆಜಿಎಫ್-2 ರೆಕಾರ್ಡ್ ಅಳಿಸಿ ಹಾಕುವ ಎಲ್ಲಾ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಕೆಜಿಎಫ್ 2 ಸಿನಿಮಾ ಹಿಂದಿ ವರ್ಷನ್ ನಾಲ್ಕು ದಿನಗಳಲ್ಲಿ 190 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದ್ರೆ 'ಪಠಾಣ್' ಎರಡು ದಿನಕ್ಕೆ 123 ಕೋಟಿ ಗಳಿಸಿದೆ. ಕೆಜಿಎಫ್ ಚಾಪ್ಟರ್-2 ಹಿಂದಿಯಲ್ಲಿ ಒಟ್ಟು 434.62 ಕೋಟಿ ಗಳಿಸಿದೆ. ಆದ್ರೆ ಪಠಾಣ್ ಮೂರೇ ದಿನದಲ್ಲಿ ಹಿಂದಿಯಲ್ಲಿ 250 ಕೋಟಿ ಕಲೆಕ್ಷನ್ ದಾಟಿಸಿದ್ದು, ಕೆಜಿಎಫ್-2 ರೆಕಾರ್ಡ್ ಬ್ರೇಕ್ ಮಾಡೋದ್ರಲ್ಲಿ ನೋ ಡೌಟ್ ಎನ್ನುತ್ತಿದೆ ಬಾಲಿವುಡ್.

Video Top Stories