ರೆಕಾರ್ಡ್ ಬುಕ್ನಲ್ಲಿ ಯಶ್ ಮತ್ತೊಂದು ಮೈಲುಗಲ್ಲು; ವಿಲನ್ ಆಗೋಕೆ 150 ಕೋಟಿ ಸಂಭಾವನೆ?
ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ 150 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ವಿಲನ್ ಪಾತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ರೆಕಾರ್ಡ್ ಬುಕ್ಗೆ ಮಾಸ್ಟರ್.. ಯಶ್ ಹೆಜ್ಜೆ ಇಟ್ಟಲ್ಲೆಲ್ಲಾ ದಾಖಲೆಗಳಷ್ಟೇ ಸೃಷ್ಟಿಯಾಗುತ್ತವೆ. ಈಗ ಯಶ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆ ಆಗಿದೆ. ಯಶ್ ಈಗ ರೆಕಾರ್ಡ್ ಬುಕ್ಗೆ ಮಾಸ್ಟರ್. ಯಾಕಂದ್ರೆ ಯಶ್ ಇಲ್ಲದ ರೆಕಾರ್ಡ್ ಬುಕ್ ಇಲ್ಲವೇ ಇಲ್ಲವೇನೋ ಅನ್ನೋ ಹಾಗಾಗಿದೆ. ಕೆಜಿಎಫ್ನಿಂದ ಅದನ್ನ ಉಳಿಸಿಕೊಂಡು ಬಂದಿರೋ ಯಶ್ ಸಧ್ಯ ಮತ್ತೊಂದು ವಿಚಾರಕ್ಕೆ ರೆಕಾರ್ಡ್ ಬುಕ್ ಓಪನ್ ಮಾಡಿ ತನ್ನ ಹಸ್ತಾಕ್ಷರ ಗೀಚಿದ್ದಾರೆ. ಅದು ಹೀರೋ ಆಗಿ ಅಲ್ಲ ವಿಲನ್ ಆಗಿ... ರಾಮಾಯಣ.. ಭಾರತದ ಅತಿ ದೊಡ್ಡ ಸಿನಿಮಾ ಪ್ರಾಜೆಕ್ಟ್.. ಮೂರ್ನಾಲ್ಕು ಪಾರ್ಟ್ ಆಗಿ ಬರುತ್ತಿರೋ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣ ರೋಲ್ ಮಾಡುತ್ತಿದ್ದಾರೆ. ರಾವಣ ಅಂದ್ರೆ ವಿಲನ್ ಅನ್ನೋ ಕಲ್ಪನೆ ಹಸಜ. ಈ ವಿಲನ್ ರೋಲ್ ಒಂದಕ್ಕೆ ಯಶ್ 150 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರಂತೆ.ಗ ಯಶ್ ರಾಮಾಯಣದಲ್ಲಿ ವಿಲನ್ ಆಗಿ ಆರ್ಭಟಿಸಲಿದ್ದಾರೆ. ರಣ್ಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತಾ ದೇವಿಯ ರೋಲ್ ಮಾಡುತ್ತಿದ್ದಾರೆ. 1000 ಕೋಟಿ ಬಜೆಟ್ನಲ್ಲಿ ಸಿದ್ಧವಾಗುತ್ತಿರೋ ರಾಮಾಯಣಕ್ಕೆ ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚಿಗೆ ಡಿವೋರ್ಸ್ ಆಗಿದ್ದು, ಗಂಡ ಸತ್ತರೂ ಹೆಣ್ಣು ಒಂಟಿನೇ: ಜಾನವಿ ಹೇಳಿಕೆ ವೈರಲ್