ಇತ್ತೀಚಿಗೆ ಡಿವೋರ್ಸ್ ಆಗಿದ್ದು, ಗಂಡ ಸತ್ತರೂ ಹೆಣ್ಣು ಒಂಟಿನೇ: ಜಾನವಿ ಹೇಳಿಕೆ ವೈರಲ್

ಎರಡು ವರ್ಷಗಳ ಕಷ್ಟದಿಂದ ಈಗ ಮುಕ್ತಿ ಪಡೆದ ಜಾನವಿ. ಡಿವೋರ್ಸ್ ಪಡೆದ ಮೇಲೆ ಪೀಸ್ ಆಗಿದ್ದೀನಿ ಎಂದ ನಟಿ...

Anchor Jhanvi r opens about divorce and family support vcs

ಕನ್ನಡ ಕಿರುತೆರೆಯ ಖ್ಯಾತ ನಟ ಜಾನವಿ ಇದೀಗ ಬೆಳ್ಳಿ ತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ನಡುವೆ ತಮ್ಮ ಡಿವೋರ್ಸ್ ವಿಚಾರವನ್ನು ಅಫೀಷಿಯಲ್ ಮಾಡಿದ್ದರು ಆದರೆ ಆನ್‌ ಪೇಪರ್ಸ್‌ ಅಫೀಷಿಯಲ್ ಆಗಿ ಸಿಕ್ಕಿದ್ದು ಇತ್ತೀಚಿಗೆ ಎನ್ನಲಾಗಿದೆ. ಯಾಕೆ ಡಿವೋರ್ಸ್ ಪಡೆದರು? ಜಾನವಿ ಈಗ ಹೇಗಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ....

'ಹೊರಗಡೆ ಅವರಿಗಿಂತ ಮನೆಯವರು ಏನು ಹೇಳುತ್ತಾರೆ ಅನ್ನೋದು ಮುಖ್ಯ ಆಗಿತ್ತು. ಈಗ ನಾನೊಂದು ಕಾರ್ಯಕ್ರಮ ಒಪ್ಪಿಕೊಂಡರೆ ಅಲ್ಲಿ ಕಾಣಿಸಿಕೊಂಡರೆ ಅಮ್ಮ ಅಣ್ಣ ಮತ್ತು ಕ್ಲೋಸ್ ಫ್ರೆಂಡ್ಸ್ ಹೇಗ್ ರಿಯಾಕ್ಟ್ ಮಾಡ್ತಾರೆ ಅನ್ನೋದು ಅಷ್ಟೇ ಮುಖ್ಯವಾಗುತ್ತದೆ. ಡಿವೋರ್ಸ್ ವಿಚಾರದಲ್ಲಿ ಹೋಗ್ಲಿ ಏನಾದರೂ ಸರಿ ಮಾಡಿಕೊಳ್ಳೋಣ ಆಂದ್ರು ಆಗುತ್ತಿಲ್ಲ. ನನಗೆ ನಿದ್ರೆ ಬರಲ್ಲ ಅಂತ ಪಾಪ ಅಣ್ಣ ಹೇಳ್ತಾರೆ ಆದರೆ ಎಲ್ಲರಿಗೂ ಯೋಚನೆ ಇರುತ್ತದೆ ಇಂದು ಕೆಲಸ ಇದೆ ಮಾಡ್ತಿದ್ದಾಳೆ ಮುಂದೆ ಹೇಗೆ ಅನ್ನೋ ಯೋಚನೆ ಇದ್ದೇ ಇರುತ್ತದೆ ಅಲ್ವಾ? ಗಂಡ ಹೆಂಡತಿ ಒಟ್ಟಿಗೆ ಇರುತ್ತಾರೆ ಚೆನ್ನಾಗಿರುತ್ತಾಳೆ ಆದರೆ ಗಂಡ ಸತ್ತ ಮೇಲೆ ಅವಳು ಒಂಟಿನೇ ಅಲ್ವಾ? ದೂರ ಆದಾಗ ಆಗುವ ಒಂಟಿ ಒಂದನ್ನೇ ಹೈಲೈಟ್ ಮಾಡ್ಬಾರ್ದು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಜಾನವಿ ಮಾತನಾಡಿದ್ದಾರೆ.

ಇನ್‌ಸ್ಟಾಗ್ರಾಂ ಫೋಟೋದಿಂದ 'ನೂರು ಜನ್ಮಕ್ಕೂ' ಅವಕಾಶ ಗಿಟ್ಟಿಸಿಕೊಂಡ ಶಿಲ್ಪಾ ಕಾಮತ್

'ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೀನಿ. ಇದ್ದಕ್ಕಿದ್ದಂತೆ ನೆನಪಾದಾಗ ಕೋಪ ಬರುತ್ತದೆ ಆಗ ಸುಮ್ಮನಾಗುತ್ತೀನಿ. ಇದ್ದಕ್ಕಿದ್ದಂತೆ ನನ್ನಲ್ಲಿ ಆಗುವ ಬದಲಾವಣೆಗಳನ್ನು ಅಮ್ಮ ಗಮನಿಸುತ್ತಿರುತ್ತಾರೆ. ಅಮ್ಮ ಮತ್ತು ಅಣ್ಣ ತುಂಬಾ ಟ್ರೆಡಿಷನಲ್ ಫ್ಯಾಮಿಲಿ ಅವರು ಇದ್ರು ಸತ್ತರೂ ಗಂಡನ ಮನೆಯಲ್ಲಿ ಇರಬೇಕು ಅನ್ನೋರು ಈಗ ಪಾಪ ಇಷ್ಟು ವರ್ಷ ಆಕೆ ಕಷ್ಟ ಪಟ್ಟಿರುವುದನ್ನು ನೋಡಿದ್ದೀವಿ ಬೇಡ ಬಿಡು ಅನ್ನುತ್ತಿದ್ದಾರೆ. ಬೋಲ್ಡ್‌ ನಿರ್ಧಾರ ತೆಗೆದುಕೊಂಡಿದ್ದು ಹೌದು, ಮೊದಲಿಗೆ ಹೋಲಿಸಿದರೆ ಈಗ ಪೀಸ್‌ ಆಫ್‌ ಮೈಂಡ್‌ ಇದೆ ಆಗ ಫುಲ್ ಪೀಸ್ ಪೀಸ್ ಆಗಿತ್ತು. ಎರಡು ವರ್ಷಗಳಿಂದ ನಡೆಯುತ್ತಿದೆ ಕೋರ್ಟ್‌ಗೆ ಹೋಗಿ ಬರಲು ಸಮಯ ಆಗುತ್ತಿರಲಿಲ್ಲ ಮುಂದೂಡಿ ಮುಂದೂಡಿ ಇತ್ತೀಚಿಗೆ ಅಫೀಷಿಯಲ್ ಆಗಿ ಡಿವೋರ್ಸ್ ಆಗಿದ್ದು. ಒಂದಾಗಬೇಕು ಅಂತಿದ್ದರೆ ಎರಡು ವರ್ಷಗಳಲ್ಲಿ ಬದಲಾವಣೆ ಆಗುತ್ತಿತ್ತು' ಎಂದು ಜಾನವಿ ಹೇಳಿದ್ದಾರೆ. 

ಅಬ್ಬಬ್ಬಾ! ಈ ವರ್ಷ ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸೆಲೆಬ್ರಿಟಿಗಳು ಇವರೇ

Latest Videos
Follow Us:
Download App:
  • android
  • ios