ಸ್ಯಾಂಡಲ್‌ವುಡ್‌ನಲ್ಲಿ ಹೊಸಬರನ್ನು ಬೆಳೆಸಿದ ಪ್ರೇಕ್ಷಕ..! ಟಾಪ್ 5 ಸಿನಿಮಾಗಳು ಯಾವುವು ಗೊತ್ತಾ..?
2023ರಲ್ಲಿ ಹೊಸಬರ ಪ್ರಯತ್ನಕ್ಕೆ ಕನ್ನಡ ಸಿನಿಪ್ರೇಕ್ಷಕ ಬಹುಪರಾಕ್ ಹೇಳಿದ್ದು, ಯಾವ ನಟ-ನಟಿಯರು ಫೇಮಸ್ ಆಗಿದ್ದಾರೆ ಅಂತ ಹೇಳ್ತಿವಿ ನೋಡಿ..
ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಅನೇಕ ಸಿನಿಮಾಗಳು ರಿಲೀಸ್ ಆಗಿ ಇತಿಹಾಸದ ಪುಟಗಳನ್ನ ಸೇರಿವೆ. ಕನ್ನಡದಲ್ಲಿ ವರ್ಷ ಇನ್ನೂರು ಮೇಲೆ ಸಿನಿಮಾ ರಿಲೀಸ್ ಆಗುತ್ತವೆ. ಆದರೆ ಸೋಲಿನ ಸಂಖ್ಯೆ ಜಾಸ್ತಿ ಇರುತ್ತದೆ. ಗೆಲುವಿನ ಸಂಖ್ಯೆ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಸಲ್ಲುತ್ತದೆ. ಕಂಟೆಂಟ್ ವಿಷಯದಲ್ಲಿ ಕಮರ್ಷಿಯಲ್ ಹೀರೋಗಳು ಟಾಪ್ ಅಲ್ಲಿಯೇ ಇರ್ತಾರೆ. ಸಣ್ಣ ಪುಟ್ಟ ಪ್ರತಿಭಾವಂತ ಕಲಾವಿದರು ಕಳೆದು ಹೋಗುತ್ತಾರೆ. ಥಿಯೇಟರ್ ಸಿಗದೇ ಒದ್ದಾಡುತ್ತಾರೆ. ಆದ್ರೆ ಈ ಕಾಂಪಿಟೇಷನ್‌ನಲ್ಲಿ ಹಲವು ಹೊಸ ಪ್ರತಿಭೆಗಳ ಸಿನಿಮಾಗಳೂ ರಿಲೀಸ್ ಆಗ್ತವೆ. ಈ ವರ್ಷ ಸಿನಿ ಪ್ರೇಮಿಗಳನ್ನು ರಂಜಿಸಿದ ಮತ್ತೊಂದು ಹಿಟ್ ಸಿನಿಮಾ ಡೇರ್ ಡೆವಿಲ್ ಮುಸ್ತಫಾ(Daredevil Musthafa). ಈ ಸಿನಿಮಾ ಸಿಂಗಲ್ ಥಿಯೇಟರ್ ಅಲ್ಲದೇ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲೂ ಓಡಿತ್ತು. ಈ ಚಿತ್ರದಲ್ಲಿ ಹೊಸಬರೇ ಇದ್ದದ್ದು ವಿಶೇಷ. ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಇವರ ಜೊತೆಗೆ ಪ್ರೇರಣಾ ಗೌಡ, ರಮಾಮಣಿ ಕೂಡ ಗಮನ ಸೆಳೆದಿದ್ದರು. ಇಡೀ ಚಿತ್ರದಲ್ಲಿ ಪ್ರೇರಣಾ ಪಾತ್ರ ತುಂಬಾನೇ ಗಮನ ಸೆಳೆದಿತ್ತು.
ಇದನ್ನೂ ವೀಕ್ಷಿಸಿ: ಸೀತೆಯಾಗುವ ಮೊದಲು ಕೃಷ್ಣನ ದರ್ಶನ ಪಡೆದ ಸಹಜ ಸುಂದರಿ! ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಯಿಪಲ್ಲವಿ!