ಸೀತೆಯಾಗುವ ಮೊದಲು ಕೃಷ್ಣನ ದರ್ಶನ ಪಡೆದ ಸಹಜ ಸುಂದರಿ! ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಯಿಪಲ್ಲವಿ!

ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಉಡುಪಿಗೆ ಬಂದಿರುವ ಅವರು, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ.

Share this Video
  • FB
  • Linkdin
  • Whatsapp

ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ(Sri Vidyavallabha Theertha Swamiji) ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ(Actress Sai Pallavi) ಅವರನ್ನು ಶ್ರೀ ಕೃಷ್ಣ ಮಠದ(Shri Krishna Math) ವತಿಯಿಂದ ಗೌರವಿಸಲಾಯಿತು. ಸಾಯಿ ಪಲ್ಲವಿ ಸದ್ಯ ಬಾಲಿವುಡ್‌ನ ರಾಮಾಯಣ(Ramayana) ಸಿನಿಮಾದಲ್ಲಿ ನಟಿಸುತ್ತಾರೆಂದು ಹೇಳಲಾಗುತ್ತಿದೆ. ರಣ್‌ಬೀರ್ ಜೋಡಿಯಾಗಿ ರಾಮನ ಪತ್ನಿ ಸೀತೆಯ ಪಾತ್ರದಲ್ಲಿ ನಟಿಸುತ್ತಾರೆನ್ನಲಾಗಿದೆ. ಹಿಂದಿಯ ಈ ಸಿನಿಮಾ ಮಾಡೋದಕ್ಕೂ ಮೊದಲು ಕೆಲ ಪವರ್ಫುಲ್ ದೇವಸ್ಥಾನಗಳ ಭೇಟಿ ಮಾಡಲು ಸಾಯಿ ಪಲ್ಲವಿ ನಿರ್ಧರಿಸಿದ್ದು ಉಡುಪಿಯ ಶ್ರೀಕೃಷ್ಣ ದೇವಾಲಯ ದರ್ಶನ ಮಾಡಿಕೊಂಡಿದ್ದಾರೆನ್ನುತ್ತವೆ ಆಪ್ತ ಮೂಲಗಳು. ಕಾಶ್ಮೀರಿ ಫೈಲ್ಸ್ ಸಿನಿಮಾ ವಿರುದ್ಧ ಮಾತನಾಡಿ ಹಿಂದೂಗಳ ವಿರೋಧ ಕಟ್ಟಿಕೊಂಡ ಸಾಯಿ ಪಲ್ಲವಿ ನಂತರ ಕ್ಷಮೆ ಯಾಚಿಸಿದ್ದರು. ಇತ್ತೀಚೆಗೆ ಯಶ್ 19 ಸಿನಿಮಾ ಟಾಕ್ಸಿಕ್‌ಗೆ ಹೀರೋಯಿನ್ ಆಗ್ತಾರೆಂಬ ಸುದ್ದಿಯೂ ದಟ್ಟವಾಗಿತ್ತು. ಇದಾದ ನಂತರ ಸಾಯಿ ಪಲ್ಲವಿ ದೊಡ್ಡ ಸುದ್ದಿಯಾಗಲಿಲ್ಲ. ಇದೀಗ ರಾಮಾಯಣ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಶ್ರೀಕೃಷ್ಣ ಮಠಕ್ಕೆ ಬೇಟಿ ನೀಡಿರುವ ಸಾಯಿ ಪಲ್ಲವಿ ಫೋಟೊಗಳು ವೈರಲ್ ಆಗಿವೆ.

ಇದನ್ನೂ ವೀಕ್ಷಿಸಿ: ಈ ವಾರ ಕಿಚ್ಚನ ಪಂಚಾಯ್ತಿಗೆ ಸುದೀಪ್ ಬರಲ್ಲ..! ಕಿಚ್ಚನ ಪಂಚಾಯ್ತಿಗೆ ಶೃತಿ ಎಂಟ್ರಿ..!

Related Video