Asianet Suvarna News Asianet Suvarna News

ದುಡ್ಡು ಖರ್ಚು ಮಾಡಿದ ತಕ್ಷಣ ಸಿನಿಮಾ ದೊಡ್ಡದಾಗೋದಿಲ್ಲ..ಅನುಭವದಿಂದ ಸಿನಿಮಾ ಕಟ್ಟಬೇಕು: ರಾಜ್‌ ಬಿ ಶೆಟ್ಟಿ

ಟೋಬಿ ಸಿನಿಮಾದ ಪೋಸ್ಟರ್‌ನಲ್ಲಿ ರಾಜ್‌ ಬಿ ಶೆಟ್ಟಿ ಮೂಗುಬಳೆ ತೊಟ್ಟು ಪೋಸ್‌ ನೀಡಿದ್ದಾರೆ. ಇದಕ್ಕಾಗಿ ಅವರು ನಾಲ್ಕು ಬಾರಿ ಮೂಗು ಚುಚ್ಚಿಸಿಕೊಂಡಿದ್ದರು. ಕೊನೆಗೆ ಇದು ಎಲ್ಲಿಯತನಕ ಹೋಗತ್ತೆಂದರೆ, ಚುಚ್ಚಿಸಿಕೊಂಡ ಜಾಗದಲ್ಲಿ ಸೆಪ್ಟಿಕ್‌ ಆಗಿತ್ತು ಎಂದು ತಿಳಿಸಿದ್ದಾರೆ.

ಬೆಂಗಳೂರು (ಆ.24): ಟಿಕೆ ದಯಾನಂದ್‌ ಅವರ 8 ಪೇಜ್‌ಗಳ ಸಣ್ಣ ಕಥೆಯ ಆಧಾರಿತ ಸಿನಿಮಾ ಟೋಬಿ. ಅದರಲ್ಲಿ ಮುಖ್ಯ ಪಾತ್ರಧಾರಿಯ ಹೆಸರು ಟೋಬಿಯಾ. ಅದನ್ನೇ ಸಣ್ಣ ಮಾಡಿಕೊಂಡು ಮೂವಿಗೆ ಇಟ್ಟಿದ್ದೇವೆ ಎಂದು ಟೋಬಿ ಚಿತ್ರದ ಬರಹಗಾರ ಹಾಗೂ ಚಿತ್ರದ ಮುಖ್ಯಭೂಮಿಕೆಯಲ್ಲಿರುವ ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿರುವ ಟೋಬಿ ಸಿನಿಮಾಗೂ ಮುನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ನಾನು ಇದು ಸಿನಿಮಾ ಆಗಬಲ್ಲ ಕಥೆ. ಟೋಬಿ ನನ್ನ ತಲೆಗೆ ಹೊಕ್ಕಿದ್ದಾನೆ. ನನ್ನ ಯೋಚನೆಗೆ ತಕ್ಕಂತೆ ಈತನ ಪಾತ್ರ ಬರೆದು ಸಿನಿಮಾ ಮಾಡಬಹುದೇ ಎಂದಾಗ ಟಿಕೆ ದಯಾನಂದ್‌ ಒಪ್ಪಿದಾಗ ಸಿನಿಮಾ ಶುರುವಾಯಿತು ಎಂದಿದ್ದಾರೆ.

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್‌ ಬಿ ಶೆಟ್ಟಿ ಕ್ಲಾರಿಟಿ

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ದುದ್ದು ಖರ್ಚು ಮಾಡಿದ ಬಳಿಕ ಯಾವ ಸಿನಿಮಾ ಕೂಡ ದೊಡ್ಡದಾಗೋದಿಲ್ಲ. ಅನುಭವದಿಂದ ಸಿನಿಮಾ ಕಟ್ಟಬೇಕು ಎಂದು ರಾಜ್‌ ಬಿ ಶೆಟ್ಟಿ ಮಾತನಾಡಿದ್ದಾರೆ.

Video Top Stories