HR ಟು ಆಕ್ಟರ್ ಪವಿತ್ರಾ ಲೋಕೇಶ್ ಬ್ಯಾಕ್ ಗ್ರೌಂಡ್ ಸಖತ್ ಇಂಟ್ರೆಸ್ಟಿಂಗ್

ಪವಿತ್ರಾ ಲೋಕೇಶ್ ಇಂದು ಸ್ಟಾರ್ ನಟಿ ಆಗಿದ್ರು ಅವ್ರ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಎದುರಿಸಿದ್ದಾರೆ. ಖ್ಯಾತ ನಟ ಮೈಸೂರು ಲೋಕೇಶ್ ಪುತ್ರಿಯಾಗಿದ್ದರೂ ಚಿತ್ರರಂಗದಲ್ಲಿ ಅವಕಾಶ ಸಿಗದೇ ಒಂದಿಷ್ಟು ವರ್ಷಗಳು ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡ್ತಿದ್ರು.
 

Share this Video
  • FB
  • Linkdin
  • Whatsapp

ಪವಿತ್ರಾ ಲೋಕೇಶ್ ಇಂದು ಸ್ಟಾರ್ ನಟಿ ಆಗಿದ್ರು ಅವ್ರ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಎದುರಿಸಿದ್ದಾರೆ. ಖ್ಯಾತ ನಟ ಮೈಸೂರು ಲೋಕೇಶ್ ಪುತ್ರಿಯಾಗಿದ್ದರೂ ಚಿತ್ರರಂಗದಲ್ಲಿ ಅವಕಾಶ ಸಿಗದೇ ಒಂದಿಷ್ಟು ವರ್ಷಗಳು ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡ್ತಿದ್ರು.

ಮೈಸೂರು ಲೋಕೇಶ್ ಮಗಳನ್ನ ಚಿತ್ರರಂಗಕ್ಕೆ ಪರಿಚಯಿಸುವ ಮುನ್ನವೇ ನಿಧನರಾದ್ರು. ಆ ನಂತ್ರ ಪವಿತ್ರ ಲೋಕೇಶ್ ಅವಕಾಶಕ್ಕಾಗಿ ಸಾಕಷ್ಟು ಜನರ ಮನೆ ಬಾಗಿಲು ಬಡಿದ್ದಿದ್ದರು. ಸುಂದರಿ ಆದ್ರು ನಾಯಕಿ ಆಗೋ ಅದೃಷ್ಟ ಮಾತ್ರ ಬರಲಿಲ್ಲ. ಆಗ ಕೈಗೆ ಸಿಕ್ಕಿದ್ದೆ , . ಮಿಸ್ಟರ್ ಅಭಿಷೇಕ್,ಬಂಗಾರದ ಕಲಶ’ ಜನುಮದ ಜೋಡಿ, ಕುರುಬನರಾಣಿ, ಉಲ್ಟಾ ಪಲ್ಟಾ,...ಕನ್ನಡದಲ್ಲಿ 73ಕ್ಕೂ ಹೆಚ್ಚು ಚಿತ್ರಗಳಲ್ಲಿ ಆಕ್ಟ್ ಮಾಡಿದ್ದಾರೆ.

ತಾಯಿ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋ ಪವಿತ್ರಾ ಲೋಕೇಶ್ ಅವ್ರಿಗೆ ಸದ್ಯ 43 ವಯಸ್ಸು. ಮೂವತ್ತು ವರ್ಷದಲ್ಲಿಯೇ ತಾಯಿ ಪಾತ್ರಕ್ಕೆ ಫಿಕ್ಸ್ ಆದ ನಟಿ ಇವ್ರು. ಪವಿತ್ರಾ ಲೋಕೇಶ್ 10ನೇ ತರಗತಿ ಓದುತ್ತಿದ್ದಾಗ ಮೈಸೂರು ಲೋಕೇಶ್ ಮರಣ ಹೊಂದುತ್ತಾರೆ. ಮೈಸೂರು ಲೋಕೇಶ್ ಹೆಸರನ್ನ ಇಂಡಸ್ಟ್ರಿಯಲ್ಲಿ ಮುಂದುವರೆಸಲು ಪವಿತ್ರಾ ಚಿತ್ರರಂಗಕ್ಕೆ ಎಂಟ್ರಿಕೊಡ್ತಾರೆ. ಅಭಿನಯ ಮಾಡುತ್ತಲೇ ಪದವಿ ಮುಗಿಸಿ ಸಿವಿಲ್ ಪರೀಕ್ಷೆಯನ್ನೂ ಬರೆಯುತ್ತಾರೆ. ಡಿಸಿ ಆಗುವ ಆಸೆಯನ್ನ ಹೊಂದಿದ್ದ ಪವಿತ್ರಾ ಅವ್ರಿಗೆ ಅಲ್ಲಿಯೂ ಅದೃಷ್ಟ ಕೈ ಹಿಡಿಯೋದಿಲ್ಲ.

ಕನ್ನಡದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದ ಪವಿತ್ರ ಅವ್ರನ್ನ ಕೈ ಹಿಡಿದು ಸ್ಟಾರ್ ಲೈಫ್ ಕೊಟ್ಟಿದ್ದು ಟಾಲಿವುಡ್ ಚಿತ್ರರಂಗ. ತಾಯಿ ಪಾತ್ರಕ್ಕೂ ಸುಂದರಿಯಾಗಿರೋ ನಟಿ ಬೇಕು ಎನ್ನುತ್ತಿದ್ದ ಚಿತ್ರರಂಗದ ಕಣ್ಣಿಗೆ ಬಿದ್ದಿದ್ದು ಕನ್ನಡದ ಈ ಪವಿತ್ರಾ ಲೋಕೇಶ್. ರವಿತೇಜಾ ಅಭಿನಯದ ದೊಂಗೋಡು ಚಿತ್ರದಲ್ಲಿ ಆಕ್ಟ್ ತಮ್ಮ ಅದೃಷ್ಟ ಬದಲಾಯಿಸಿಕೊಂಡ್ರು. 

Related Video