ತನಗಿಂತ 10 ಪಟ್ಟು ಬಡವನನ್ನು ಮದುವೆಯಾಗುತ್ತಿರುವ ನಟಿ: ಆತನ ಬಳಿಯಿರುವ ಆಸ್ತಿ ಎಷ್ಟು ?

ನಟಿ ತಮನ್ನಾ ಭಾಟಿಯಾ ಮದುವೆಯಾಗುತ್ತಿರುವ ಹುಡುಗ ಅವರಿಗಿಂತ ಬಡವನಾಗಿದ್ದು,ಕೇವಲ 17 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
 

Share this Video
  • FB
  • Linkdin
  • Whatsapp

ಸಾಮಾನ್ಯವಾಗಿ ಹೀರೋಯಿನ್ಸ್‌ ಹೀರೋನಾ ಅಥವಾ ತಮಗಿಂತ ಶ್ರೀಮಂತರಾಗಿರುವ ನಿರ್ಮಾಪಕರನ್ನ ಮದುವೆಯಾಗುತ್ತಾರೆ. ಆದ್ರೆ ನಟಿ ತಮನ್ನಾ ಭಾಟಿಯಾ ವಿಚಾರದಲ್ಲಿ ಇದು ಸುಳ್ಳಾಗಿದೆ. ಹೌದು, ಅವರು ತಮಗಿಂತ ಬಡವನಾಗಿರುವ ಹುಡುಕನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹಬ್ಬಿದೆ. ತಮನ್ನಾ ಮದುವೆಯಾಗುವ ಹುಡುಗ ಅವರಿಗಿಂತ 10 ಪಟ್ಟು ಬಡವನಾಗಿದ್ದಾನೆ. ತಮನ್ನಾ ಬಳಿ 150 ಕೋಟಿ ಆಸ್ತಿ ಇದ್ದು, ಅವರು ಮದುವೆಯಾಗುತ್ತಿರುವ ಹುಡುಗ ಕೇವಲ 17 ಕೋಟಿ ಹೊಂದಿದ್ದಾರೆ. ಹೀಗೆ ನೋಡಿದ್ರೆ, ನಟಿ ಕಾಜಲ್‌ ಅಗರ್‌ವಾಲ್‌, ನಯನಾ ತಾರಾ, ಕತ್ರಿನಾ ಕೈಫ್‌ ತಮಗಿಂತ ಕಡಿಮೆ ಆಸ್ತಿ ಹೊಂದಿರುವವರನ್ನೇ ಮದುವೆಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಹುಟ್ಟಿ ಬೆಳೆದ ಮನೆಯಲ್ಲೇ ಮಗಳ ಕಿವಿ ಚುಚ್ಚಿಸಿದ ಶೆಟ್ರು: ಈ ಶಾಸ್ತ್ರ ಹೇಗಿತ್ತು ನೋಡಿ!

Related Video