ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್ ಕೃಷ್ಣ-ಸೋನಲ್ ಭರ್ಜರಿ ರೊಮ್ಯಾನ್ಸ್!
ಜಯಂತ್ ಕಾಯ್ಕಿಣಿ ಸಾಹಿತ್ಯ, ಕಬೀರ್ ರಫಿ ಮ್ಯೂಸಿಕ್!
ಮತ್ತೊಂದು ಸಕ್ಸಸ್ ಫುಲ್ ಸಿನಿಮಾ ಆಗುತ್ತಾ ಶುಗರ್ ಫ್ಯಾಕ್ಟರಿ
ಶುಗರ್ ಫ್ಯಾಕ್ಟರಿ ರೊಮ್ಯಾಂಟಿಕ್ ಸಾಂಗ್ ಈಗ ರಿಲೀಸ್
ಡಾರ್ಲಿಂಗ್ ಕೃಷ್ಣ ಸಿನಿ ಪ್ರೇಕ್ಷಕರಿಗೆ ಈಗ ಶುಗರ್ ಇದ್ದಂತೆ. ಶುಗರ್ ಇದ್ದಲ್ಲಿ ಇರುವೆಗಳು ಹೇಗೆ ಮುತ್ತಿಕೊಳ್ತಾವೋ ಹಾಗೆ ಸಿನಿ ಪ್ರೇಕ್ಷಕರು ಡಾರ್ಲಿಂಗ್ ಕೃಷ್ಣನ(Darling Krishna) ಸಿನಿಮಾಗಳನ್ನ ಮುಗಿ ಬಿದ್ದು ನೋಡ್ತಾರೆ. ಇದೀಗ ಕೃಷ್ಣನ ಕಡೆಯಿಂದ ಭರ್ಜರಿ ಎಂಟರ್‌ಟೈನ್‌ಮೆಂಟ್ ಕೊಡೋಕೆ ಮತ್ತೊಂದು ಸಿನಿಮಾ ರೆಡಿಯಾಗಿದೆ. ಅದೇ ಶುಗರ್ ಫ್ಯಾಕ್ಟರಿ(Sugar Factory). ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್(Romatic song) ಈಗ ರಿಲೀಸ್ ಆಗಿದೆ. ಜಯಂತ್ ಕಾಯ್ಕಿಣಿ ಬರೆದ ಈ ಹಾಡಿನಲ್ಲಿ ಸೋನಲ್ ಮಂಥೋರಾ ರೊಮ್ಯಾನ್ಸ್ ಮಾಡಿದ್ದು, ಶುಗರ್ ಫ್ಯಾಕ್ಟರಿಗೆ ದೀಪಕ್ ಅರಸ್ ನಿರ್ದೇಶನ, ಆರ್ ಗಿರೀಶ್ ನಿರ್ಮಾಣ ಇದೆ.
ಇದನ್ನೂ ವೀಕ್ಷಿಸಿ: ಟಾಲಿವುಡ್‌ನಲ್ಲಿ ಜೋರಾಯ್ತು 'ಕಣ್ಣಪ್ಪ'ನ ಸೌಂಡ್: ತೆಲುಗಿನಲ್ಲಿ ಶಿವನ ಪಾತ್ರ ಮಾಡ್ತಾರಾ ಕರುನಾಡ ಶಿವು ?