ಟಾಲಿವುಡ್‌ನಲ್ಲಿ ಜೋರಾಯ್ತು 'ಕಣ್ಣಪ್ಪ'ನ ಸೌಂಡ್‌: ತೆಲುಗಿನಲ್ಲಿ ಶಿವನ ಪಾತ್ರ ಮಾಡ್ತಾರಾ ಕರುನಾಡ ಶಿವು ?

ಬೇಡರ ಕಣ್ಣಪ್ಪ. ಇದು ಡಾಕ್ಟರ್ ರಾಜ್ ಕುಮಾರ್ ನಟಿಸಿದ್ದ ಮೊದಲ ಮೈತಲಾಜಿಕಲ್ ಸಿನಿಮಾ. ಅಪ್ಪನಂತೆ ಮಗ ಅನ್ನೋ ಹಾಗೆ ಅಣ್ಣಾವ್ರ ಬೇಡರ ಕಣ್ಣಪ್ಪ ಸಿನಿಮಾವನ್ನ ಸ್ವಲ್ಪ ಚೇಂಜ್ ಮಾಡಿ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾ ಮಾಡಿದ್ರು ಅಣ್ಣಾವ್ರ ಮಗ ಡಾ. ಶಿವರಾಜ್ ಕುಮಾರ್.
 

First Published Oct 14, 2023, 9:46 AM IST | Last Updated Oct 14, 2023, 9:46 AM IST

ಈಗ ಟಾಲಿವುಡ್‌ನಲ್ಲಿ ಒನ್ಸ್ ಅಗೈನ್ ಕಣ್ಣಪ್ಪನ(Kannappa) ಸೌಂಡು ಶುರುವಾಗಿದೆ. ನಟ ವಿಷ್ಣುಮಂಚು ಕಣ್ಣಪ್ಪನನ್ನ ಈಗಿನ ಟೆಕ್ನಾಲಜಿ ಬಳಸಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಣ್ಣಪ್ಪ ಸಿನಿಮಾ ಮಾಡ್ತಿದ್ದಾರೆ. ಈ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್(Shivaraj kumar) ಕೂಡ ಅಸ್ತು ಎಂದಿದ್ದಾರಂತೆ. ಜೈಲರ್‌ನಲ್ಲಿ ಸಿಕ್ಕ ಇಮೇಜ್‌ನಿಂದ ಫುಲ್ ಜೋಶ್‌ನಲ್ಲಿರೋ ಶಿವಣ್ಣ ವಿಷ್ಣು ಮಂಚು ಜೊತೆಗಿನ ಕಣ್ಣಪ್ಪ ಸಿನಿಮಾಗೂ ಓಕೆ ಅಂದಿದ್ದಾರೆ. ಆದ್ರೆ ಶಿವಣ್ಣ ಪಾತ್ರ ಮಾಡ್ತಾರೆ ಅನ್ನೋದೆ ಈಗಿರೋ ಕುತೂಹಲ. ಕನ್ನಡದ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವನ ಪಾತ್ರ ಮಾಡಿದ್ರು. ಶಿವಣ್ಣ ಕಣ್ಣಪ್ಪನಾಗಿದ್ರು. ಈಗ ತೆಲುಗುನಲ್ಲಿ ನಟ ವಿಷ್ಣು ಮಂಚು ಕಣ್ಣಪ್ಪ ಆಗ್ತಿದ್ದಾರೆ. ಇಲ್ಲಿ ಶಿವನ ರೋಲ್ಅನ್ನ ಹೆಸರಿಗೆ ತಕ್ಕಂತೆ ಶಿವರಾಜ್ ಕುಮಾರ್ ಮಾಡ್ತಾರೆ ಅಂತ ಸುದ್ದಿ ಹರಿದಾಡ್ತಿದೆ. ಹಾಗ್‌ ನೋಡಿದ್ರೆ ಕಣ್ಣಪ್ಪ ಕಥೆ ತೆಲುಗು ಮಂದಿಗೆ ಹೊಸದೇನಲ್ಲ. 1976ರಲ್ಲಿ ನಟ ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ಭಕ್ತ ಕಣ್ಣಪ್ಪ ಅಂತ ಸಿನಿಮಾ ಮಾಡಿದ್ರು. ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್‌ಗೂ(Prabhas) ನಟಿಸಬೇಕು ಅನ್ನೋ ಆಸೆ ಇತ್ತು. ಇದನ್ನ ಸ್ವತಃ ಪ್ರಭಾಸ್ ಹೇಳಿಕೊಂಡಿದ್ರು. ಹೀಗಾಗಿ ಕಣ್ಣಪ್ಪನ ಕಥೆ ಕೈಗೆತ್ತಿಕೊಂಡಿರೋ ವಿಷ್ಣುಮಂಚು ಪ್ರಭಾಸ್‌ಗೂ ಗೆಸ್ಟ್ ರೋಲ್ ಗೆ ಅಪ್ರೋಚ್ ಮಾಡಿದ್ದಾರೆ. ಪ್ರಭಾಸ್ ಯಾವ್ ಪಾತ್ರ ಮಾಡ್ತಾರೆ ಕಾದು ನೋಡ್ಬೇಕು. 

ಇದನ್ನೂ ವೀಕ್ಷಿಸಿ  ಗಲ್ಲಿ ಗಲ್ಲಿಯಲ್ಲೂ ಬ್ಯಾಡ್ ಬಾಯ್ಸ್ ಸೌಂಡ್! 'ಭೀಮ'ನ ಎರಡನೇ ಹಾಡಿಗೆ ಭರ್ಜರಿ ತಯಾರಿ !