Asianet Suvarna News Asianet Suvarna News

ಪವಿತ್ರಾ ಗೆಳತಿ ಸಮತಾ ಬುಡಕ್ಕೂ ಬಂತು ರೇಣುಕಾಸ್ವಾಮಿ ಕೇಸ್! ಶಾಕ್ ಡಿವೈಸ್‌ಗೆ ಹಣ ಕೊಟ್ಟಿದ್ಯಾರು?

ಪವಿತ್ರಾಗೌಡ ಗೆಳತಿ ಸಮತಾ  ಹಿನ್ನೆಲೆ ಕೇಳಿ ಪೊಲೀಸರೇ ಶಾಕ್..!
ಪೋಸ್ಟ್ ಮಾರ್ಟಂನಲ್ಲೂ ದರ್ಶನ್‌ಗೆ ಸಹಾಯ ಮಾಡಲು ಯತ್ನ..?
ಸಮತಾ ಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ?
 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ಸಮತ ಎನ್ನುವ ಪವಿತ್ರಾ (Pavitra Gowda) ಅವರ ಗೆಳತಿ ಆರೋಪಿ ಧನರಾಜ್‌ಗೆ 3 ಸಾವಿರ ಹಣ ಕಳುಹಿಸಿದ್ದರು ಎನ್ನಲಾಗಿದೆ. ಇದೇ ಹಣದಲ್ಲಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಸಮತಾಳನ್ನು(Samata) ವಿಚಾರಣೆಗೆ ಕರೆದಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಪವಿತ್ರಾ ಸ್ನೇಹಿತೆಗೂ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಸಮತಾ ಅವರು ಜೈಲಿನಲ್ಲಿ ದರ್ಶನ್(Darshan) ಹಾಗೂ ಪವಿತ್ರಾ ಅವರನ್ನು ಭೇಟಿಯಾಗಿ ಬಂದಿದ್ದರು. ಇದಾದ ಬಳಿಕ ಪೊಲೀಸರು ಸಮತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದು ಆಡುಗೋಡಿಯ ಟೆಕ್ನಿಕಲ್ ಸೆಲ್‌ನಲ್ಲಿ 3 ಗಂಟೆಗಳ ಕಾಲ ಸುಮಾರು 30 ಪ್ರಶ್ನೆಗಳನ್ನ ಕೇಳಿ ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಮತ್ತೊಮ್ಮೆ ವಿಚಾರಣೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ.ದರ್ಶನ್ , ಪವಿತ್ರಾಗೆ ಸಹಾಯ ಮಾಡಲು ಪವಿತ್ರಾ ಗೆಳತಿ ಸಮತಾ ಯತ್ನಿಸಿದ್ದಾರೆನ್ನಳಾಗಿದೆ. ಪವಿತ್ರಾಗೌಡ ಗೆಳತಿ ಸಮತಾ  ಹಿನ್ನಲೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಪೋಸ್ಟ್ ಮಾರ್ಟಂನಲ್ಲೂ ದರ್ಶನ್‌ಗೆ ಸಹಾಯ ಮಾಡಲು ಸಮತಾ ಯತ್ನಿಸಿದ್ದಾರೆನ್ನಲಾಗಿದೆ. ಸಮತಾ ಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ.? ಎನ್ನಲಾಗಿದ್ದು. ದರ್ಶನ್ ಗ್ಯಾಂಗ್ನಿಂದ ಕೊಲೆಯಾದ ರೇಣುಕಾಸ್ವಾಮಿ ಪೋರ್ಟ್ ಮಾರ್ಟಂನಲ್ಲೂ ಈಕೆಯ ಕೈವಾಡವಿದೆಯಾ ಎಂಬ ಅನುಮಾನ ಈಗ ಅಧಿಕಾರಿಗಳಿಗೆ ಮೂಡಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಶ್ಯೂರಿಟಿ ವಿಚಾರದಲ್ಲಿ ಎಚ್ಚರವಹಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾದ ದಿನ

Video Top Stories