‘ಚಂದು’ ಸಿನಿಮಾದಲ್ಲಿ ‘ಕಿಚ್ಚ’ನ ‘ತುಂಟಾಟ’..! ಕರುನಾಡಿನ ಪಾಲಿಗೆ ‘ಪಾರ್ಥ’ನೆ ‘ಸ್ವಾತಿಮುತ್ತು’..!
ಅಭಿಮಾನಿ ಕೋಟೆಯ ಸಾಮ್ರಾಟ ಕಿಚ್ಚ ಸುದೀಪ್..!
ಸ್ಯಾಂಡಲ್ವುಡ್ ‘ರನ್ನ’ನಿಗೆ 51ನೇ ಹುಟ್ಟು ಹಬ್ಬ..!
ಕೋಟಿಗೊಬ್ಬನ 46ನೇ ಸಿನಿಮಾದ ಟೈಟಲ್ ರಿಲೀಸ್..!
ಅಭಿಮಾನಿಗಳ ಹೃದಯ ಸ್ಪರ್ಶಿಸಿ ಸ್ಯಾಂಡಲ್‌ವುಡ್‌ಗೆ(Sandalwood) ತಮ್ಮ ಐರನ್ ಲೆಗ್ ಇಟ್ರು, ಮೊದಲು ಚಾಕಲೇಟ್ ಬಾಯ್, ಲವರ್ ಬಾಯ್ ಆಗಿ ತೆರೆಮೇಲೆ ಬಂದಿದ್ದೇ ತಡ, ಅಂದಿನ ಕಾಲಕ್ಕೆ ಹುಡುಗಿರ ಡ್ರೀಮ್ ಬಾಯ್ ಆಗಿದ್ದ, ಕಿಚ್ಚನ ಹ್ಯಾಂಡ್ಸಮ್ ಲೂಕಿಗೆ ಫಿದಾ ಆದವರೇ ಇಲ್ಲ. ಅದ್ರಲ್ಲೂ ಸ್ಪರ್ಶ ಸಿನಿಮಾದ ಹಾಡಂತೂ ಯಾರ ಹೃದಯಕ್ಕೂ ಸ್ಪರ್ಶಿಸದೇ ಇರೋದಿಲ್ಲ. ಹುಚ್ಚ ಸಿನಿಮಾ.. ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಪ್ರೇಕ್ಷಕನಿಗೆ ಹುಚ್ಚು ಹಿಡಿಸಿದ್ದ ಸಿನಿಮಾ ಅಂದ್ರೆ ಅದು ಸುದೀಪ್(Sudeep) ನಟನೆಯಲ್ಲಿ ರಿಲೀಸ್ ಆದ 2ನೇ ಸಿನಿಮಾ. ಆಗಷ್ಟೇ ಸುದೀಪ್ ಅಭಿನಯದ 'ಸ್ಪರ್ಶ' ಮತ್ತು 'ಹುಚ್ಚ' ತೆರೆಗೆ ಬಂದು, ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಈ ಸಂದರ್ಭದಲ್ಲಿ ಡಬಲ್ ಆಕ್ಟಿಂಗ್ ಮತ್ತು ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚುವ ಪ್ರಯೋಗಕ್ಕೆ ಸುದೀಪ್ ಕೈಹಾಕಿದರು. ನಂತರ 2001ರಲ್ಲಿ ವಾಲಿ ಸಿನಿಮಾ(Vaali movie) ರಿಲೀಸ್ ಆಯ್ತು. ಲವರ್ ಬಾಯ್ ಆಗಿದ್ದ ಸುದೀಪ್ ಅವರು ಸಡನ್ ಆಗಿ ನೆಗೆಟಿವ್ ಶೆಡ್‌ನಲ್ಲಿ ಅಭಿನಯಿಸಿರುವುದು ಸರಳ ಅಂತ ತೋರಿಸಿಕೊಟ್ಟಿದ್ರು. ಆದ್ರೆ ಈ ವಾಲಿ ಸಿನಿಮಾ ಅಭಿಮಾನಿಗಳಿಗಿಂದ ಸ್ವತಃ ಕಿಚ್ಚ ಸುದೀಪ್‌ಗೆ ಮೋಸ್ಟ್ ಫೆವರೇಟ್ ಸಿನಿಮಾವಂತೆ.
ಇದನ್ನೂ ವೀಕ್ಷಿಸಿ: 10 ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟ ಕಿಚ್ಚ ಸುದೀಪ್..! ಫಸ್ಟ್ ಟೈಂ ಪ್ಯಾನ್ ಇಂಡಿಯಾ ಸಿನಿಮಾ ಡೈರೆಕ್ಷನ್..!