ಸುದೀಪ್ ಬರ್ತಡೇ ಫೆಸ್ಟಿವೆಲ್‌ಗೆ ಭಾರಿ ತಯಾರಿ: ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಫ್ಯಾನ್ಸ್ ಭೇಟಿ !
12 ಗಂಟೆ 1 ನಿಮಿಷಕ್ಕೆ 'ಕಿಚ್ಚ-46' ಟೈಟಲ್ ಲಾಂಚ್.!
ಕಿಚ್ಚ ಸುದೀಪ್ ಬರ್ತಡೇ ಫೆಸ್ಟಿವೆಲ್‌ಗೆ ಭಾರಿ ತಯಾರಿ.!
ಪ್ರಿಯಾ ಸುದೀಪ್ ಸಾರಥ್ಯದಲ್ಲಿ ಕಿಚ್ಚನ ಹುಟ್ಟುಹಬ್ಬ..!
ಸ್ಯಾಂಡಲ್‌ವುಡ್‌ನ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಜನ್ಮದಿನ ಸೆಪ್ಟೆಂಬರ್ 2ಕ್ಕೆ ಅದ್ಧೂರಿಯಾಗಿ ನಡೆಯಲಿದೆ. ಆದ್ರೆ ಕಿಚ್ಚನ ಹುಟ್ಟುಹಬ್ಬದ(Birthday) ಫೆಸ್ಟಿವೆಲ್ ಇಂದು ರಾತ್ರಿ 10 ಗಂಟೆಯಿಂದಲೇ ಶುರುವಾಗ್ತಿದೆ. ಇದೇ ಫಸ್ಟ್ ಟೈಂ ಮನೆಯಿಂದ ಹೊರಗೆ ಬಂದು ಬೆಂಗಳೂರಿನ(Bengaluru) ನೈಸ್ ರಸ್ತೆ ಬಳಿಯ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕೆ ನಂದಿ ಲಿಂಕ್ಸ್ ಗ್ರೌಂಡ್ ಅದ್ಧೂರಿಯಾಗಿ ರೆಡಿಯಾಗಿದೆ. ಅಭಿನಯ ಚಕ್ರವರ್ತಿ 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಭಾರಿ ಜನ್ಮದಿನ ಕಿಚ್ಚನ ಫ್ಯಾನ್ಸ್‌ಗೂ(Fans) ತುಂಬಾನೆ ಸ್ಪೆಷಲ್. ಯಾಕಂದ್ರೆ ಸುದೀಪ್ ಫ್ಯಾನ್ಸ್ ಜೊತೆ ಬರ್ತ್ಡೇ ಆಚರಿಸಿ ಅಭಿಮಾನಿಗಳ ಸ್ವೀಟ್ ವಿಶಸ್ಅನ್ನ ಪಡೆದು ಮೂರು ವರ್ಷಗಳಾಗಿವೆ. ಹೀಗಾಗಿ ತನ್ನೆಲ್ಲಾ ಫ್ಯಾನ್ಸ್‌ಗೆ ಸುದೀಪ್ ಕಡೆಯಿಂದ ಬಿಗ್ ಸರ್ಪ್ರೈಸ್‌ಗಳನ್ನ ರೆಡಿ ಮಾಡಿದ್ದಾರೆ. ಅದರಲ್ಲೊಂದು ಕಿಚ್ಚ46 ಸಿನಿಮಾದ ಟೈಟಲ್ ಟೀಸರ್. ಸುದೀಪ್ ತನ್ನ 46ನೇ ಸಿನಿಮಾದ ಮಾಸ್ ಟೈಟಲ್ಅನ್ನ ಇಂದು ಮಧ್ಯರಾತ್ರಿ 12 ಗಂಟೆ 1 ನಿಮಿಷಕ್ಕೆ ತನ್ನೆಲ್ಲ ಫ್ಯಾನ್ಸ್‌ಗೆ ಅರ್ಪಿಸುತ್ತಿದ್ದಾರೆ. ಅದಕ್ಕಾಗಿ ನಂದಿ ಲಿಂಗ್ಸ್ ಗ್ರೌಂಡ್‌ನಲ್ಲಿ ದೊಡ್ಡ ಎಲ್ಇಡಿ ಪರದೆ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ವೀಕ್ಷಿಸಿ: ಪ್ರೇಮಿಗಳ ಮನಸ್ಸು ಗೆದ್ದ 'ಸಪ್ತ ಸಾಗರದಾಚೆ ಎಲ್ಲೋ': ರಕ್ಷಿತ್-ರುಕ್ಮಿಣಿ ಲವ್ ಸ್ಟೋರಿ ಬೆಸ್ಟ್ ಎಂದ ಪ್ರೇಕ್ಷಕ..!