ಪ್ರೇಮಿಗಳ ಮನಸ್ಸು ಗೆದ್ದ 'ಸಪ್ತ ಸಾಗರದಾಚೆ ಎಲ್ಲೋ': ರಕ್ಷಿತ್-ರುಕ್ಮಿಣಿ ಲವ್ ಸ್ಟೋರಿ ಬೆಸ್ಟ್ ಎಂದ ಪ್ರೇಕ್ಷಕ..!

ಪ್ರೇಮಿಗಳ ಮನಸ್ಸು ಗೆದ್ದ 'ಸಪ್ತ ಸಾಗರದಾಚೆ ಎಲ್ಲೋ'
ರಕ್ಷಿತ್-ರುಕ್ಮಿಣಿ ಲವ್ ಸ್ಟೋರಿ ಬೆಸ್ಟ್ ಎಂದ ಪ್ರೇಕ್ಷಕ..!
ಪ್ರೇಮಕಥೆ ಬೇಕಾ 'ಸಪ್ತ ಸಾಗರದಾಚೆ ಎಲ್ಲೋ'ನೋಡಿ!

Share this Video
  • FB
  • Linkdin
  • Whatsapp

ಲವ್ ಸ್ಟೋರಿಗಳು ಎವರ್‌ಗ್ರೀನ್‌. ಬಿಗ್ ಸ್ಕ್ರೀನ್‌ನಲ್ಲಿ ಎಂತೆಂಥವೋ ಸ್ಟೋರಿಗಳು ಬಂದು ಹೋಗಿ, ಗೆದ್ದು ಬೀಗಿವೆ ಅಂತ ಕೆದಕಿದ್ರೆ ಲೆಕ್ಕಕ್ಕೆ ಸಿಗೋದಿಲ್ಲ. ಅಂತಹ ಎವರ್ ಗ್ರೀನ್ ಪ್ರೇಮಕಥೆಯ ಲಿಸ್ಟ್‌ನಲ್ಲಿ ಈಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty), ಸಹಜ ಸುಂದರಿ ರುಕ್ಮಿಣಿ ವಸಂತ್(Rukmini Vasanth) ಸಹಿ ಹಾಕಿದ್ದಾರೆ. ಅದು 'ಸಪ್ತ ಸಾಗರದಾಚೆ ಎಲ್ಲೋ'(Sapta Sagaradaache Ello) ಸಿನಿಮಾ ಮೂಲಕ. ಪ್ರೀತಿ, ಕನಸು, ಜೈಲು, ರೋಧನೆ, ವೇದನೆಯ ಪ್ರೇಮಿಗಳಿಬ್ಬರ ಕಥೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಜೊತೆ ಗೋದಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್ ಈ ಭಾರಿ ಸಪ್ತ ಸಾಗರದಾಚೆ ಎಲ್ಲೋ ಅನ್ನೊ ಪ್ಯೂರ್ ಲವ್ ಸ್ಟೋರಿ(Love story) ಹೆಣೆದಿದ್ದಾರೆ. ಮಿಡಲ್ ಕ್ಲಾಸ್ ಪ್ರೇಮಿಗಳಿಬ್ಬರ ಪ್ರೇಮಕತೆ ಪ್ರೇಮಿಗಳ ಮನಸ್ಸು ಗೆಲ್ಲುತ್ತಿದ್ದು, ಈಗಿನ ಕಾಲಘಟಕ್ಕೆ ರಕ್ಷಿತ್-ರುಕ್ಮಿಣಿಯ ಲವ್ ಸ್ಟೋರಿಯೇ ಬೆಸ್ಟ್ ಎನ್ನುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಶ್ರಾವಣ ಶನಿವಾರ ಆಚರಣೆ ಹೇಗಿರಬೇಕು ? ವಿಷ್ಣುವಿನ ಪ್ರಾರ್ಥನೆ ಹೀಗೆ ಮಾಡಿ ?

Related Video