ಹುಟ್ಟುಹಬ್ಬದ 'ಸುವರ್ಣ' ಮಹೋತ್ಸವದಲ್ಲಿ ಕಿಚ್ಚ: ಅಭಿಮಾನದ 'ಕಿಚ್ಚೋತ್ಸವ'ದಲ್ಲಿ ಮಿಂದೆದ್ದ ಸುದೀಪ್ ಏನಂದ್ರು.?

50ನೇ ವರ್ಷದ ಬರ್ತ್‌ ಡೇ ಆಚರಿಸಿಕೊಂಡ ಸುದೀಪ್!
ಕಿಚ್ಚನ ಮನೆ ಮುಂದೆ ಅಭಿಮಾನದ ಹರ್ಷೋದ್ಗಾರ!
ಸುದೀಪ್ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಫ್ಯಾನ್ಸ್..!

First Published Sep 3, 2023, 8:50 AM IST | Last Updated Sep 3, 2023, 8:50 AM IST

ಮಧ್ಯ ರಾತ್ರಿ ಆಗಸದಲ್ಲಿ ಮೂಡಿದ ಕಿಚ್ಚನ ಚಿತ್ತಾರ. ಕತ್ತಬ್ಬದ ಝಲಕ್.ಲು ಕವಿದಿದ್ರು ಕಣ್ಣು ಹಾಯಿಸಿದಲ್ಲೆಲ್ಲಾ ಕಾಣೋ ಜನ ಸಾಗರ. ಆ ಕಡೆಯಿಂದ ಕಿಚ್ಚ ಕಿಚ್ಚ ಅನ್ನೋ ಅಭಿಮಾನದ ಕೂಗು. ಯಸ್, ಇದು ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್(Sudeep) ಹುಟ್ಟುದ ಸಂಭ್ರಮ. ಆದರೆ ಈ ಹುಟ್ಟುಹಬ್ಬದ ಜಾತ್ರೆ ಸೃಷ್ಟಿಯಾಗಿದ್ದು, ಬೆಂಗಳೂರಿನ ನಂದಿ ಲಿಂಗ್ಸ್ ಗ್ರೌಂಡ್‌ನಲ್ಲಿ(Nandi link ground). ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ 50ನೇ ವರ್ಷದ ಹುಟ್ಟುಹಬ್ಬ. 'ಸುವರ್ಣ' ಮಹೋತ್ಸವದಲ್ಲಿರೋ ಬಾದ್ ಷಾ ತನ್ನ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾತ್ರಿ ಬೆಂಗಳೂರಿನ(Bengaluru) ನಂದಿ ಲಿಂಗ್ಸ್ ಗ್ರೌಂಡ್‌ನಲ್ಲಿ ಕಿಚ್ಚನ ಪತ್ನಿ ಪ್ರಿಯಾ ಸುದೀಪ್( Priya Sudeep) ತನ್ನ ಪತಿ ಕಿಚ್ಚನಿಗಾಗಿ 500 ಡ್ರೋಣ್ ಕ್ಯಾಮೆರಾಗಳನ್ನ ಬಳಸಿ ಆಗಸದಲ್ಲಿ ಸುದೀಪ್ ಭಾವಚಿತ್ರ ಮತ್ತು ಹೆಸರನ್ನ ಮೂಡಿಸುವ ಮೂಲಕ ಲೈಟ್ ಶೋ ಮಾಡಿಸಿ ಸರ್ಪ್ರೈಸ್ ಕೊಟ್ಟಿದ್ರು. ಹೆಬ್ಬುಲಿ ಕಿಚ್ಚ ತನ್ನ ಜೀವನದಲ್ಲಿ ಆಫ್ ಸೆಂಚ್ಯುರಿ ಭಾರಿಸಿದ್ದಾರೆ. ಮೂರು ವರ್ಷದಿಂದ ಫ್ಯಾನ್ಸ್ ಜೊತೆ ಜನ್ಮದಿನ ಆಚರಿಸಿಕೊಂಡಿರಲಿಲ್ಲ ಬಾದ್ ಷಾ. ಆದ್ರೆ ಈ ಭಾರಿ ನಿರಾಸೆ ಮಾಡ್ಬಾರ್ದು ಅಂತ ಇಡೀ ದಿನ ತನ್ನ ಡೈ ಹಾರ್ಡ್ ಸ್ನೇಹಿತರಿಗೆ ಅಂತಲೇ ಹುಟ್ಟುಹಬ್ಬವನ್ನ ಮೀಸಲಿಟ್ಟಿದ್ರು. ಹೀಗಾಗಿ ಜೆ.ಪಿ ನಗರದ ಕಿಚ್ಚನ ಮನೆ ಅಕ್ಕ ಪಕ್ಕದಲ್ಲೆಲ್ಲಾ ಅಭಿಮಾನದ ಹರ್ಷೋದ್ಘಾರ ಮೊಳಗಿತ್ತು.

ಇದನ್ನೂ ವೀಕ್ಷಿಸಿ:  ಇಸ್ರೋದಲ್ಲಿ ಜಾತಿ ಹುಡುಕಿದ ಕಾಂಗ್ರೆಸ್, ಬಿಕೆ ಹರಿಪ್ರಸಾದ್ ಕೀಳು ರಾಜಕೀಯಕ್ಕೆ ಆಕ್ರೋಶ!