
Srinidhi Shetty ದೀಪಿಕಾ 'ಬಿಕಿನಿ'ಗೆ ಟಾಂಗ್ ಕೊಟ್ಟ ಶ್ರೀನಿಧಿ 'ಸೀರೆ': ಇದು ರೀನಾ-ದೀಪಿಕಾ ಕೇಸರಿ ಕಥೆ
ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ ವಿಚಾರದಲ್ಲಿ, ಕೆಜಿಎಫ್ ಸುಂದ್ರಿ ಶ್ರೀನಿಧಿ ಶೆಟ್ಟಿಯ ಸೀರೆಯನ್ನು ಎಳೆದು ತಂದಿದ್ದಾರೆ ನೆಟ್ಟಿಗರು.
ನಟಿ ಶ್ರೀನಿಧಿ ಶೆಟ್ಟಿ ಕೇಸರಿ ಬಣ್ಣದ ಸಣ್ಣ ಝರಿಯಂಚಿನ ಸೀರೆ ಉಟ್ಟುಕೊಂಡು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀನಿಧಿ ಬರೀ ಸೀರೆಯಲ್ಲಿ ಮಾತ್ರ ಕಾಣಿಸಿಲ್ಲ. ಕೊರಳಿಗೆ ಮುತ್ತಿನ ಹಾರ ಹಾಗೂ ಹಣೆಗೆ ಪುಟ್ಟ ಬಿಂದಿ ಇಟ್ಟು ಸಖತ್ ಕ್ಯೂಟ್ & ಲವ್ಲೀ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸಂಸ್ಕೃತಿ ಎಂದರೆ ಇದು. ಜನರು ಈ ರೀತಿ ಕೇಸರಿ ಬಟ್ಟೆಯನ್ನು ಧರಿಸಬಹುದು. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಟಿಯ ಫೋಟೋಗೆ 6 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
Add Asianetnews Kannada as a Preferred Source
