Kantara:ಕೆಎಂಎಫ್ ಪರೀಕ್ಷೆಯಲ್ಲಿ ಕಾಂತಾರ ಸಿನಿಮಾ ಬಗ್ಗೆ ಪ್ರಶ್ನೆ: ಎಲ್ಲೆಲ್ಲಿಯೂ 'ಭೂತಕೋಲ'ದ ಕ್ರೇಜ್

ಕಾಂತಾರ ಸಿನಿಮಾದ ಬಗ್ಗೆ ಇತ್ತೀಚಿಗೆ ನಡೆದ ಕರ್ನಾಟಕ ಮಿಲ್ಕ್‌ ಫೆಡರೇಷನ್‌ ಇಲಾಖೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಅದನ್ನು ಸಪ್ತಮಿ ಗೌಡ ಹಂಚಿಕೊಂಡಿದ್ದಾರೆ.
 

Share this Video
  • FB
  • Linkdin
  • Whatsapp

400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗವನ್ನು ದೊಡ್ಡ ಹಂತಕ್ಕೆ ಕೊಂಡೊಯ್ದ ಕಾಂತಾರ ಸಿನಿಮಾದ ಬಗ್ಗೆ ಇತ್ತೀಚಿಗೆ ನಡೆದ ಕರ್ನಾಟಕ ಮಿಲ್ಕ್‌ ಫೆಡರೇಷನ್‌ ಇಲಾಖೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ಲೀಲಾ ಉರ್ಫ್‌ ಸಪ್ತಮಿ ಗೌಡ ಹಂಚಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಯಾರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಗೊತ್ತಿಲ್ಲ ಆದರೆ ಲೀಲಾ ಫೀಡ್‌ ತುಂಬಾ ಮೆಸೇಜ್‌ಗಳು ತುಂಬಿದೆ. ಇತ್ತೀಚಿಗೆ ಬಿಡುಗಡೆಗೊಂಡ 'ಕಾಂತಾರ' ಚಲನಚಿತ್ರವು ಯಾವುದಕ್ಕೆ ಸಂಬಂಧಿಸಿದುದಾಗಿದೆ ಎಂದು ಕೇಳಿ ಜಲ್ಲಿಕಟ್ಟು, ಭೂತಕೋಲ, ಯಕ್ಷಗಾನ ಹಾಗೂ ದಮ್ಮಾಮಿ ಎಂದು ನಾಲ್ಕು ಆಯ್ಕೆಗಳನ್ನು ಕೊಡಲಾಗಿತ್ತು. ಖಂಡಿತ ಪ್ರತಿಯೊಬ್ಬ ಕನ್ನಡಿಗನೂ ಕಾಂತಾರ ಸಿನಿಮಾ ನೋಡಿ ಸರಿಯಾದ ಉತ್ತರ ಕೊಟ್ಟಿರುತ್ತಾರೆ. 'ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಬೆಸ್ಟ್‌ ಪ್ರಶ್ನೆ ಇದು. ಕಾಂತಾರ ಚಿತ್ರದ ಬಗ್ಗೆ ಇತ್ತೀಚಿಗೆ ನಡೆದ ಕೆಎಮ್‌ಎಫ್‌ ಪರೀಕ್ಷೆಯಲ್ಲಿ ಕೇಳಲಾಗಿದೆ' ಎಂದು ಸಪ್ತಮಿ ಬರೆದುಕೊಂಡಿದ್ದಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ ಭೂತಕೋಲ.

Vedha: ಶಿವಣ್ಣನ 125ನೇ ಸಿನಿಮಾ ಹುಟ್ಟಿದ್ದು ಹೇಗೆ: ಸೀಕ್ರೆಟ್ ರಿವೀಲ್ ಮಾಡಿದ ಹ್ಯಾಟ್ರಿಕ್ ಹೀರೋ

Related Video