Asianet Suvarna News Asianet Suvarna News

ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್..! ಕಿಲ್ಲಿಂಗ್ ಸ್ಟಾರ್ ಓದೋ 5 ಪುಸ್ತಕಗಳು ಯಾವುವು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿ ಆಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್‌ಗೆ ಜೈಲು ಬಂಧನ ಆಗಿ ಒಂದು ವಾರ ಕಳೆದಿದೆ. ಯಾರನ್ನೂ ಮಾತನಾಡಿಸದೇ ಟಿವಿ, ಪುಸ್ತಕ, ಪೇಪರ್ ಓದದೇ ಛೇ ಎಂಥಾ ತಪ್ಪು ಮಾಡಿದೆ ಅಂತ ಮನ ನೊಂದುಕೊಂಡು  ದರ್ಶನ್ ಮೌನವಾಗಿದ್ದಾರಂತೆ.

ಜೈಲು ಪಾಲಾಗಿರೋ ನಟ ದರ್ಶನ್ ಈಗ ಹೇಗಿದ್ದಾರೆ..? ಅವರ ಜೈಲು ದಿನಗಳ ಹೇಗೆ ನಡೆಯುತ್ತಿವೆ. ಹೀರೋ ಆಗಿದ್ದಾಗ ಐಶಾರಾಮಿ ಕಾರು ಬಂಗಲೆ ಕೈಗೆ ಕಾಲಿಗೆ ಆಳು ಕಾಳು, ಹೋಟೆಲ್‌ನಲ್ಲಿ ವಾಸ್ತವ್ಯ ಎಣ್ಣೆ ಪಾರ್ಟಿ ಅಬ್ಬಬ್ಬ ದರ್ಶನ್ (Darshan)ದರ್ಬಾರ್‌ಗೆ ಎಲ್ಲೆಯೇ ಇರಲಿಲ್ಲ. ಆದ್ರೆ ಈಗ ಈ ಕಿಲ್ಲಿಂಗ್ ಸ್ಟಾರ್‌ಗೆ ಅದ್ಯಾವುದು ಸಿಗುತ್ತಿಲ್ಲ. ನಾಲ್ಕು ಗೋಡೆ ಮಧ್ಯೆ ಕಂಬಿ ಎಣೆಸುತ್ತಾ ಕೂರೋ ಸ್ಥಿತಿ ದರ್ಶನ್‌ರದ್ದು. ಹೇಗಾದ್ರು ಮಾಡಿ ದಿನ ದೂಡಿದ್ರೆ ಸಾಕಪ್ಪಾ ಅನ್ನೋ ಸ್ಥಿತಿ ಬಂದೋದಗಿದೆ. ಇಷ್ಟು ದಿನ ಕತ್ತಲು ಕೋಣೆಯ ಜೈಲಲ್ಲಿ ಒಂಟಿಯಾಗಿದ್ದ ದರ್ಶನ್ ಈಗ ಅಲ್ಲಿನ ಕೈದಿಗಳ ಜೊತೆ ಸ್ನೇಹ ಬೆಸೆಯುತ್ತಿದ್ದಾರಂತೆ. ಅಷ್ಟೆ ಅಲ್ಲ ದಿನ ನಿತ್ಯ ಕೈಯಲ್ಲಿ ಬಾಟೆಲ್ ಹಿಡಿದು ಪಾರ್ಟಿ ಮಾಡಿ ಬೇರೆಯದ್ದೇ ಲೋಕದಲ್ಲಿ ತೇಲುತ್ತಿದ್ದ ಈ ನಟನ ಕೈಗೆ ಈಗ ಪುಸ್ತಕ ಬಂದಿದೆಯಂತೆ. ಪಿಎಸ್ಐ ಸ್ಕ್ಯಾಮ್ ಆರೋಪಿಗಳಿದ್ದ ರೂಂನಲ್ಲಿರುವ ದರ್ಶನ್, ಮಾನಸಿಕವಾಗಿ ಮತ್ತಷ್ಟು ಕುಗ್ಗಿದ್ದು, ಓದಲು ಐದು ಕಥೆ ಪುಸ್ತಕಗಳನ್ನ ಪಡೆದಿದ್ದಾರಂತೆ. ಮಧ್ಯಾಹ್ನ ಮತ್ತು ಸಂಜೆ ಕಥೆ ಪುಸ್ತಕಗಳನ್ನ(story books) ಓದಿಕೊಂಡು ಸುಮ್ಮನ್ನಿರ್ತಾರಂತೆ. ನಟ ದರ್ಶನ್ ಕೊಲೆ (renukaswamy murder case) ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಲು ಕಾರಣ ಇದೇ ಜನುಮಗ ಗೆಳತಿ ಮದುವೆ ಆಗಿ ಡಿವೋರ್ಸ್ ಪಡೆದು ಒಂಟಿ ಜೀವನ ನಡೆಸುತ್ತಿರೋ ಪವಿತ್ರಾ ಗೌಡ ಅನ್ನೋದು ಎಲ್ಲರಿಗೂ ಗೊತ್ತು. ಪವಿತ್ರಾ ಗೌಡನನ್ನ ಮೆಚ್ಚಿಸೋಕೆ ಹೋಗಿ ದರ್ಶನ್ ಕೊಲೆ ಆರೋಪ ಹೊತ್ತಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿ ಆದ್ರೆ ದರ್ಶನ್ ಎ2 ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. 

ಇದನ್ನೂ ವೀಕ್ಷಿಸಿ:  ಭಾರೀ ಮಳೆಗೆ ಕೊಚ್ಚಿಹೋದ ಕಾರು..ಬಸ್‌ಗಳು..! ರಾಷ್ಟ್ರರಾಜಧಾನಿಯಲ್ಲಿ 24 ಗಂಟೆ ನಾನ್‌ಸ್ಟಾಪ್ ಮಳೆ..!

Video Top Stories