ಅತ್ತಿಗೆ ಮಲಗಿದವರು ಎದ್ದಿಲ್ಲ, ಲೋ ಬಿಪಿ ಅಂದುಕೊಂಡಿದ್ವಿ: ನಟ ಶ್ರೀಮುರುಳಿ

ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ  ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಈ ಬಗ್ಗೆ ನಟ ಶ್ರೀಮುರುಳಿ ಮಾತನಾಡಿದ್ದಾರೆ.
 

Share this Video
  • FB
  • Linkdin
  • Whatsapp

ನನಗೆ ಅಣ್ಣ ಫೋನ್‌ ಮಾಡಿ ಹೇಳಿದ್ದು ಇಷ್ಟೇ ಸಂಬಂಧಿಕರ ಜೊತೆ ಟ್ರಿಪ್‌ಗೆ ಹೋಗಿದ್ದಾರೆ. ಅಣ್ಣ ಶೂಟಿಂಗ್‌ ಮುಗಿಸಿಕೊಂಡು ಜಾಯಿನ್‌ ಆಗಿದ್ದಾರೆ. ಹೀಗೆ ಎಲ್ಲಾ ಟೈಮ್‌ ಸ್ಪೆಂಡ್‌ ಮಾಡುವಾಗ ಮಲಗಿದವರು ಮತ್ತೆ ಎದ್ದಿಲ್ಲ. ಹಾಗಾಗಿ ಎಲ್ಲಾ ಲೋ ಬಿಪಿ ಅಂದುಕೊಂಡಿದ್ದರು. ಅಲ್ಲಿಂದ ಬಂದ ಮೇಲೆ ಎಲ್ಲಾ ಡಿಲೇಟ್ಸ್‌ ಗೊತ್ತಾಗಲಿದೆ. ಇದು ಆಗಿರೋದು ನಿಜ ಎಂದು ನಟ ಶ್ರೀಮುರುಳಿ(Sri Murali) ಸ್ಪಂದನಾ(spandana) ಸಾವಿನ ಬಗ್ಗೆ ಈ ರೀತಿ ಮಾತನಾಡಿದ್ದಾರೆ. ಮೂರು ದಿನಗಳ ಹಿಂದೆ ಕುಟುಂಬ ಸಮೇತ ಅವರು ಬ್ಯಾಂಕಾಕ್‌ ಪ್ರವಾಸಕ್ಕೆ(Bangkok trip) ತೆರಳಿದ್ದರು. ಅವರ ಮೃತದೇಹ ಮಂಗಳವಾರ ಬೆಂಗಳೂರಿಗೆ ಬರಲಿದೆ. ಸ್ಪಂದನಾ ವಿಜಯ್‌ ರಾಘವೇಂದ್ರ(actor vijay raghavendra) ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಅವರ ತಂದೆ ಬೆಂಗಳೂರಿನ ಮಾಜಿ ಕಮೀಷನರ್‌ ಬಿಕೆ ಶಿವರಾಮ್‌. ಸ್ಪಂದನಾ ಅಣ್ಣ ರಕ್ಷಿತ್‌ ಶಿವರಾಂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ವೀಕ್ಷಿಸಿ: ತೂಕ ಇಳಿಸಿಕೊಂಡಿದ್ದೇ ವಿಜಯ್‌ ರಾಘವೇಂದ್ರ ಪತ್ನಿ ಸಾವಿಗೆ ಕಾರಣವಾಯ್ತಾ ?

Related Video