ತೂಕ ಇಳಿಸಿಕೊಂಡಿದ್ದೇ ವಿಜಯ್‌ ರಾಘವೇಂದ್ರ ಪತ್ನಿ ಸಾವಿಗೆ ಕಾರಣವಾಯ್ತಾ ?

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಬ್ಯಾಂಕಾಕ್‌ನಲ್ಲಿ ಹೃದಯಾಘಾತವಾಗಿದೆ. ತೂಕ ಇಳಿಕೆಗೆಯೇ ಇದಕ್ಕೆ ಕಾರಣವಾಯ್ತಾ ಎಂಬ ಅನುಮಾನ ಇದೀಗ ಮೂಡಿದೆ.
 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ(vijay raghavendra) ಪತ್ನಿ ಸ್ಪಂದನಾ(spandana) ಬ್ಯಾಂಕಾಕ್‌ನಲ್ಲಿ ಹೃದಯಘಾತದಿಂದ ಅಗಲಿದ್ದಾರೆ. ಸಹೋದರ ಸಹೋದರಿಯರ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದ ಸ್ಪಂದನಾ ಶಾಪಿಂಗ್ ಮುಗಿಸಿಕೊಂಡು ಹೋಟೆಲ್‌ ರೂಮ್‌ಗೆ ತೆರಳುವಾಗ ಹೃದಯಾಘಾತವಾಗಿದೆ(heart attack) ಎಂದು ಆಪ್ತ ಮೂಲಗಳು ಹೇಳುತ್ತದೆ. ಮತ್ತೊಂದೆಡೆ ಅವರು ದಿಢೀರ್‌ ಅಂತಾ 16 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು ಎನ್ನಲಾಗ್ತಿದೆ. ಪ್ರತಿದಿನ ಜಿಮ್‌. ಡಯೆಟ್‌ ಮಾಡಿ ಸ್ಪಂದನಾ ತೂಕವನ್ನು ಇಳಿಸಿಕೊಂಡಿದ್ದರಂತೆ. ಹಾಗಾಗಿ ಇದರಿಂದಲೇ ಅವರಿಗೆ ಹೃದಯಾಘಾತವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ನಟ ವಿಜಯ್‌ ರಾಘವೇಂದ್ರ, ತಂದೆ ಬಿ.ಕೆ. ಶಿವರಾಮ್‌ ಸದ್ಯ ಬ್ಯಾಂಕಾಕ್‌ಗೆ ತೆರಳಿದ್ದಾರೆ. 

ಇದನ್ನೂ ವೀಕ್ಷಿಸಿ: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ: ಸಂತಾಪ ಸೂಚಿಸಿದ ಸಚಿವ ದಿನೇಶ್‌ ಗುಂಡೂರಾವ್‌

Related Video