
'ಚಿನ್ನಾರಿ ಮುತ್ತನ' ಬಾಳಲ್ಲಿ ಬಿರುಗಾಳಿ: ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಸ್ಪಂದನಾ !
ಚಿನ್ನಾರಿ ಮುತ್ತನ ಬಾಳಲ್ಲಿ ಬಿರುಗಾಳಿ ಬೀಸಿದೆ..ಜೀವಕ್ಕೆ ಜೀವ.. ಪ್ರಾಣಕ್ಕೆ ಪ್ರಾಣವಾಗಿದ್ದ ಸ್ಪಂದನಾ ವಿಜಯನ ಬಾಳಲ್ಲಿ ಶೋಕಗೀತೆ ಹಾಡಿದ್ದಾಳೆ.ವಿಧಿಯಾಟಕ್ಕೆ ಶರಣಾದ ಸ್ಪಂದನಾ ಪತಿಯ ನೆನಪಿನ ಪುಟದಲ್ಲಿ ಚಿರನಿದ್ರೆಗೆ ಜಾರಿದ್ದಾಳೆ.
ನಟ ವಿಜಯ್ ರಾಘವೇಂದ್ರ( Vijay raghavendra) ಮತ್ತು ಸ್ಪಂದನಾ(spandana) 2007 ಆಗಸ್ಟ್ 26ರಂದು ಸಪ್ತಪದಿ ತುಳಿದರು. ಅಂದಿನಿಂದ ನನಗೆ ನೀನು, ನಿನಗೆ ನಾನು ಎನ್ನುವಂತೆ ಅನ್ಯೋನತೆಯಲ್ಲಿ ಬದುಕುತ್ತಿದ್ದರು. ಕಳೆದ ವರ್ಷ ತಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ENGAGEMENT ಆಗಿ ಇಂದಿಗೆ ಹದಿನೈದು ವರ್ಷಗಳು ಎಂದು ಬರೆದು ಕೊಂಡಿದ್ದ ವಿಜಯರ್ ರಾಘವೇಂದ್ರ "ಬೇರೆ ಏನು ಬೇಕು ನೀನು ಇರುವಾಗ" ಎಂದು ಪತ್ನಿ ಜೊತೆಗಿನ ಫೋಟೋ ಶೇರ್ ಮಾಡಿದ್ದರು. ಈ ಹಾಲು-ಜೇನಿನ ಜೋಡಿ ಇನ್ನೇನು 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಡಲು ಕೇವಲ 19ದಿನಗಳು ಬಾಕಿ ಇತ್ತು. ಅಷ್ಟರಲ್ಲಾಗಲೇ ಸ್ಪಂದನಾ ವಿಜಯ್ ಜೊತೆಗಿನ ಬಾಳಪಯಣಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಪತ್ನಿಯೇ ಸರ್ವಸ್ವ ಎಂದುಕೊಂಡಿದ್ದ ಪತಿಗೆ ಒಮ್ಮೆ ಮದುವೆ ಆನಿವರ್ಸರಿಗೆ ಕೈಮೇಲೆ ಪತಿ ಹೆಸರು ಟ್ಯಾಟೂ(Tattoo) ಹಾಕಿಸಿಕೊಂಡು ಸರ್ಪ್ರೈಸ್ ಕೊಟ್ಟಿದ್ದರಂತೆ ಸ್ಪಂದನಾ. ಅಡುಗೆ ಮಾಡೋದ್ರಲ್ಲಿ ಎಕ್ಸ್ಪರ್ಟ್ ಆಗಿದ್ದರಂತೆ.. ಅದ್ರಲ್ಲೂ ನಾನ್ ವೆಜ್ ಅಡುಗೆ ಮಾಡೋದ್ರಲ್ಲಿ ಎತ್ತಿದ ಕೈ. ಅಡುಗೆ ಮನೆಗೆ ಪತಿಗೆ ಎಂಟ್ರಿನೇ ಕೊಡ್ತಿರಲಿಲ್ವಂತೆ. ಅಡುಗೆ ಶೋನಲ್ಲಿ ಕೂಡ ಸ್ಪಂದನಾ ಅವರು ಪತಿ ಜೊತೆ ಅತಿಥಿಯಾಗಿ ಭಾಗವಹಿಸಿದ್ದರು. 2016 ರಲ್ಲಿ ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಜೊತೆ ಅಭಿನಯಿಸಿ, ತೆರೆ ಮೇಲೂ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ವೀಕ್ಷಿಸಿ: ನಾಳೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಕ್ರಿಯೆ: ಬಿ.ಕೆ. ಹರಿಪ್ರಸಾದ್