ನಾಳೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಕ್ರಿಯೆ: ಬಿ.ಕೆ. ಹರಿಪ್ರಸಾದ್‌

ಸಾಂಯಕಾಲದ ಥಾಯ್‌ ಫ್ಲೈಟ್‌ನಲ್ಲಿ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗುತ್ತಿದೆ ಎಂದು ಸ್ಪಂದನಾ ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಥೈಲ್ಯಾಂಡ್‌ ರಾಷ್ಟ್ರದ ವಿಧಿ ವಿಧಾನಗಳು ಇಂದು ಮಧ್ಯಾಹ್ನ 1 ಗಂಟೆಗೆ ಮುಗಿಯಲಿವೆ. ಸಾಂಯಕಾಲದ ಥಾಯ್‌ ಫ್ಲೈಟ್‌ನಲ್ಲಿ ಪಾರ್ಥಿವ ಶರೀರವನ್ನು ಬೆಂಗಳೂರಿಗೆ(Bengaluru) ತೆಗೆದುಕೊಂಡು ಬರುತ್ತಾರೆ. ಸುಮಾರು ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದು ಇಳಿಯಲಿದೆ. ನಂತರ ನಾಳೆ ಮಧ್ಯಾಹ್ನನದವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ( Harishchandra Ghat) ಅಂತ್ಯಕ್ರಿಯೆ ಮಾಡುವ ಬಗ್ಗೆ ಕುಟುಂಬ ಸದಸ್ಯರು ನಿರ್ಧಾರ ಮಾಡಿದ್ದಾರೆ ಎಂದು ಸ್ಪಂದನಾ(spandana) ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್‌( B. K. Hariprasad) ಹೇಳಿದ್ದಾರೆ. ಬ್ಯಾಂಕಾಂಕ್‌ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ವಿಜಯ್‌ ಅವರಿಗೆ ಮಲಗಿದ್ದಲ್ಲೇ ಹೃದಯಾಘಾತವಾಗಿ ಸಾವು ಕಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ದೇವರು ಅವರಿಬ್ಬರಿಗೆ ವರ ಕೊಟ್ಟು, ಈಗ ಒಂದು ಕೊಂಡಿಯನ್ನು ಕಿತ್ತುಕೊಂಡಿದ್ದಾನೆ: ನಟ ಧರ್ಮ

Related Video