Asianet Suvarna News Asianet Suvarna News

Vasishta simha-Haripriya; ಹಸೆಮಣೆ ಏರಿದ ಸಿಂಹಪ್ರಿಯಾ; ಯಾರೆಲ್ಲ ಗಣ್ಯರು ಭಾಗಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿಗೆ ಸ್ಯಾಂಡಲ್ ವುಡ್‌ನ ಅನೇಕ ಗಣ್ಯರು ಶುಭಕೋರಿದ್ದಾರೆ. 

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಾಂಪತ್ಯಕ್ಕೆ ಕಾಲಿಟ್ಟರು. ಇಂದು ಗಣರಾಜ್ಯ ದಿನದಂದೆ ವೈವೈಹಿಕ ಜೀವನಕ್ಕೆ ಕಾಲಿಟ್ಟಿದ್ದು ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಮದುವೆ ಸಮಾರಂಭ ನಡೆದಿದೆ.  ಹರಿಪ್ರಿಯಾ ಮತ್ತು ವಸಿಷ್ಠ ಮದುವೆಯ ಸುಂದರ ಫೋಟೋಗಳು ರಿವೀಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರು ಸರಳವಾಗಿ ಹಸೆಮಣೆ ಏರಿದ್ದು ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ಅಂದಹಾಗೆ ಇವರ ಮದುವೆಗೆ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ಭಾಗಿಯಾಗಿ ಶುಭಹಾರೈಸಿದರು. ಧನಂಜಯ್, ಅಮೃತಾ ಐಯ್ಯಂಗರ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.