ಹಿಂದಿಯಲ್ಲೂ ಬರಲಿದೆ ಕಾಂತಾರ!

ಕಾಂತಾರ ಸಿನಿಮಾ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು, ಇಡೀ ಭಾರತೀಯ ಚಿತ್ರರಂಗವೇ ತಲೆ ಬಾಗುವಂತೆ ಮಾಡಿದೆ. ಹಾಗಾಗಿ ಸಿನಿಮಾವನ್ನು ಹಿಂದಿ ಭಾಷೆಗೆ ಡಬ್ ಮಾಡಲು ನಿರ್ಧರಿಸಲಾಗಿದ್ದು, ಹಿಂದಿಯಲ್ಲೂ ಟ್ರೇಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ.
 

Share this Video
  • FB
  • Linkdin
  • Whatsapp

ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ದೇಶದಾದ್ಯಂತ ಪ್ರೇಕ್ಷಕರು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.
ಜನರು ಈ ಸಿನಿಮಾವನ್ನು ಕನ್ನಡದಲ್ಲೇ ನೋಡಿ ಕೊಂಡಾಡುತ್ತಿದ್ದಾರೆ. ಆದ್ರೂ ಕಾಂತಾರ ಸಿನಿಮಾವನ್ನು ಆಯಾ ಭಾಷೆಯಲ್ಲೇ ನೋಡುವುದಕ್ಕೆ ಅವಕಾಶ ಮಾಡಿಕೊಡಿ ಅಂತ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಹೀಗಾಗಿ ಕಾಂತಾರ ದೈವದ ವೈಬ್ರೇಷನ್ ಬಾಲಿವುಡ್'ನಲ್ಲಿ ಶುರುವಾಗ್ತಿದೆ. ಕಾಂತಾರ ಸಿನಿಮಾ ಹಿಂದಿ ಭಾಷೆಗೆ ಡಬ್ ಆಗುತ್ತಿದ್ದು, ಅಕ್ಟೋಬರ್ 09ರಂದು ಕಾಂತಾರ ಸಿನಿಮಾದ ಹಿಂದಿ ಟ್ರೈಲರ್ ರಿಲೀಸ್ ಆಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video