Asianet Suvarna News Asianet Suvarna News

ಕೇಸರಿ ಶಾಲು ಹೊದ್ದ ಶಾರೂಖ್ ಖಾನ್‌: ಗಣಪತಿ ಪೂಜೆಯಲ್ಲಿ ನಟ ಭಾಗಿ !

ನಟ ಶಾರುಖ್‌ ಖಾನ್‌ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯ ಗಣಪತಿ ಪೂಜೆಯಲ್ಲಿ ಭಾಗಿಯಾಗಿದ್ದು, ಕೇಸರಿ ಶಾಲನ್ನು ಹಾಕಿಕೊಂಡಿದ್ರು.
 

ಶಾರುಖ್ ಖಾನ್ ಗೆ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಇದೆ. ಅವರ ಪತ್ನಿ ಗೌರಿ ಖಾನ್ (Gauri Khan)ಹಿಂದೂ. ಈ ಕಾರಣದಿಂದ ಅವರು ಈ ಧರ್ಮದ ಆಚರಣೆಗಳನ್ನು ಮಾಡುತ್ತಾರೆ. ಇತ್ತೀಚೆಗೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಅವರ ಮನೆಯ ಗಣಪತಿ ಪೂಜೆಗೆ(Ganpati Pooja) ತೆರಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್(Shah Rukh khan) ಅವರಿಗೆ ಕೇಸರಿ ಶಾಲು ಹೊದಿಸಲಾಗಿದೆ. ಅವರು ಗಣಪತಿ ಮೂರ್ತಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ಬಾರಿಗೆ ಮಂತ್ರಾಲಯಕ್ಕೆ ತೆರಳಿ ಹರಿಪ್ರಿಯಾ ದಂಪತಿ ರಾಯರ ದರ್ಶನ ಪಡೆದಿದ್ದಾರೆ. ಮಂತ್ರಾಲಯದ ಮಠಕ್ಕೆ ಆಗಮಿಸಿದ  ದಂಪತಿ ಮೊದಲು ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ಬಳಿಕ ಪೀಠಾಧಿಪತಿ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿಗೆ ಶ್ರೀಗಳು ಫಲಮಂತ್ರಾಕ್ಷತೆ ವಿತರಿಸಿ  ಸನ್ಮಾನ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ರಕ್ಷಿತ್-ರಶ್ಮಿಕಾ ಸ್ಟೋರಿಯಲ್ಲಿ ಬಿಗ್ ಅಪ್‌ಡೇಟ್‌: ಹಳೇ ಲವರ್ ಜತೆ ಸಂಪರ್ಕದಲ್ಲಿದ್ದಾರಾ ..?