ರಕ್ಷಿತ್-ರಶ್ಮಿಕಾ ಸ್ಟೋರಿಯಲ್ಲಿ ಬಿಗ್ ಅಪ್‌ಡೇಟ್‌: ಹಳೇ ಲವರ್ ಜತೆ ಸಂಪರ್ಕದಲ್ಲಿದ್ದಾರಾ ..?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸೌಂಡು ಜೋರಾಗಿದೆ. ಅದಕ್ಕೆ ಕಾರಣ 777 ಚಾರ್ಲಿ ಸಿನಿಮಾ. ಈ ಸಿನಿಮಾ ಬಿಗ್ ಸಕ್ಸಸ್ ಆಗೋಕೆ ದಾರಿ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್ರ ಕೆಜಿಎಫ್ ಸೀರಿಸ್. ಕೆಜಿಎಫ್ ಹಾದಿಯಲ್ಲೇ ಹೋದ 777 ಚಾರ್ಲಿಗೆ ಪ್ಯಾನ್ ಇಂಡಿಯಾ ವಾರ್ಮ್ ವೆಲ್ಕಮ್ ಸಿಕ್ಕಿತ್ತು. ಈ ಚಾರ್ಲಿ ತಂದುಕೊಟ್ಟ ಗೆಲುವು ಈಗ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಮಾರ್ಕೆಟ್ಗೆ ದಾರಿ ಮಾಡಿದೆ. 
 

First Published Sep 26, 2023, 9:43 AM IST | Last Updated Sep 26, 2023, 9:43 AM IST

ಕನ್ನಡದಲ್ಲಿ ಹಿಟ್ ಲೀಸ್ಟ್ ಸೇರಿರೋ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತೆಲುಗುಗೆ ಡಬ್ ಆಗಿ ರಿಲೀಸ್ ಆಗ್ತಿದೆ. ಈ ಸಿನಿಮಾ ಪ್ರಚಾರಕ್ಕೆ ಹೋದ ರಕ್ಷಿತ್ ಶೆಟ್ಟಿ ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್(Yash) ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರೋ ರಕ್ಷಿತ್ ಯಶ್ ಒಬ್ಬ ದೊಡ್ಡ ಕನಸುಗಾರ ಅಂದಿದ್ದಾರೆ. ಈ ವೀಡಿಯೋ ಈಗ ಸಿಕ್ಕಾಪಟ್ಟ ವೈರಲ್ ಆಗುತ್ತಿದೆ. ಇದೇ ವೇಳೆ ರಕ್ಷಿತ್ ಶೆಟ್ಟಿ(Rakshit Shetty) ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ನಂತ್ರ ಸ್ನೇಹ ಆ ನಂತರ ಪ್ರೇಮ ಅದಾದ ನಂತರ ನಿಶ್ಚಿತಾರ್ಥ ಕೊನೆಗೆ ಬ್ರೇಕಪ್‌ನಲ್ಲಿ ಎಂಡ್ ಆದ ಕತೆ ನಿಮ್ಗೆಲ್ಲಾ ಗೊತ್ತು. ಆದ್ರೆ ರಕ್ಷಿತ್ ಹಾಗು ರಶ್ಮಿಕಾ(Rashmika Mandanna) ಸ್ಟಿಲ್ ಕಾಂಟ್ಯಾಕ್ಟ್ನಲ್ಲಿದ್ದಾರೆ. ಏ ನೋ ವೇ ಚಾನ್ಸೇ ಇಲ್ಲ. ಬೇಡ ಅಂತ ಬಿಟ್ ಹೋದ್ ಹುಡ್ಗಿ ಜೊತೆ ಯಾದಾದ್ರು ಸಂಪರ್ಕದಲ್ಲಿರ್ತಾರಾ ? ಅಂತ ನೀವ್ ಹೇಳ್ಬಹುದು. ಆದ್ರೆ ಇದಕ್ಕೆ ರಕ್ಷಿತ್ ಏನ್ ಹೇಳ್ತಾರೆ ಗೊತ್ತಾ ? ಅಯ್ಯಯ್ಯೋ ಸ್ಟಿಲ್ ರಕ್ಷಿತ್ ರಶ್ಮಿಕಾ ಸಂಪರ್ಕದಲ್ಲಿದ್ದಾರಂತೆ.  

ಇದನ್ನೂ ವೀಕ್ಷಿಸಿ:  ಸಿದ್ಧವಾಗುತ್ತಾ ಕನ್ನಡದ 'RRR' ಸಿನಿಮಾ..? ಕನ್ನಡದಲ್ಲಿ 'RRR' ಸುಳಿವು ಕೊಟ್ಟ ರಕ್ಷಿತ್ ಶೆಟ್ಟಿ..!

Video Top Stories