ಶಾರುಖ್ ಖಾನ್ ಕೈ ಹಿಡಿದ ದಕ್ಷಿಣದ ಸ್ಟಾರ್ಸ್..! ಸೌತ್‌ನಲ್ಲಿ ಕಿಂಗ್ ಖಾನ್ ಮಿಂಚಲು ಕಾರಣ ಇವ್ರೇ..!
ಶಾರುಖ್ ಗೆಲುವಿಗೆ ಬೇಕೇ ಬೇಕು ಸೌತ್ ಸ್ಟಾರ್ಸ್..!
ಜವಾನ್‌ನಲ್ಲಿ ಕಿಂಗ್ ಖಾನ್ ಮಿಂಚಲು ಕಾರಣ ಇವ್ರೇ!
ಚೆನ್ನೈ ಎಕ್ಸ್ಪ್ರೆಸ್, ಪಠಾಣ್ ಗೆಲುವಿಗೆ ಕಾರಣ ದೀಪಿಕಾ!
ಕಿಂಗ್ ಖಾನ್ ಶಾರುಖ್ ಬಿಟೌನ್ ಸೂಪರ್ ಸ್ಟಾರ್. ವರ್ಷ ಪೂರ್ತಿ ಪ್ರದರ್ಶನ ಕಾಣೋ ಸಿನಿಮಾ ಕೊಟ್ಟಿರೋ ಬಿಗ್ ಸ್ಟಾರ್. ಆದ್ರೇನಂತೆ, ದಕ್ಷಿಣ ಭಾರತದಲ್ಲಿ ಮಾತ್ರ ಶಾರುಖ್ ನೆಪ ಅಷ್ಟೆ. ಇಲ್ಲಿ ಕಿಂಗ್ ಖಾನ್ ಯಾವತ್ತು ಫುಲ್ ಡಲ್. ಶಾರುಖ್ (Shah Rukh khan)ಸಿನಿಮಾ ಗೆಲುವಿಗೆ ಬೇಕೇ ಬೇಕು ಸೌತ್ ಸ್ಟಾರ್ಸ್. ಈಗ ಜವಾನ್‌ನಲ್ಲೂ ಅದು ಪ್ರ್ಯೂ ಆಗಿದೆ. ಜವಾನ್ ಸಿನಿಮಾ(Jawan) ದಕ್ಷಿಣ ಭಾರತದಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಿದೆ. ಜವಾನ್‌ನಲ್ಲಿ ದಕ್ಷಿಣದ ಅದೃಷ್ಟ ಲಕ್ಷ್ಮಿ ಶಾರುಖ್‌ಗೆ ಒಲಿದಿದ್ದಾಳೆ. ದಕ್ಷಿಣ ಭಾರತ(South India) ಒಂದರಲ್ಲೇ ಶಾರುಖ್‌ರ ಜವಾನ್ ಸಿನಿಮಾ ಫಸ್ಟ್ ಡೇ 55 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಕಿಂಗ್ ಖಾನ್ ಸಿನಿ ಇತಿಹಾಸದಲ್ಲೇ ಫಸ್ಟ್ ಟೈಂ ರೆಕಾರ್ಡ್. ಆದ್ರೆ ಇದಕ್ಕೆ ಕಾರಣ ಮಾತ್ರ ಸೌತ್ ಸ್ಟಾರ್ಸ್. ಜವಾನ್ ನಲ್ಲಿ ನಟಿಸಿದ್ದ ನಯನತಾರ ಮತ್ತು ವಿಜಯ್ ಸೇತುಪತಿ ಹಾಗೂ ಜವಾನ್ ಡೈರೆಕ್ಟರ್ ಅಟ್ಲಿ ಸೇರಿ ಶಾರುಖ್ ಖಾನ್‌ಗೆ ದಕ್ಷಿಣ ಭಾರತದಲ್ಲಿ ಗೆಲುವಿನ ಹಾರ ಹಾಕಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಈ ದಿನ ಸಿಂಹ ರಾಶಿಯವರಿಗೆ ಲಾಭದಾಯಕವಾಗಿದ್ದು, ಕೊಂಚ ಹಣಕಾಸಿನ ತೊಂದರೆ