ಕಡಲ ತಡಿಯಲ್ಲಿ ಪ್ರೀತಿಯ ಅಮಲಿನಲ್ಲಿ ರಕ್ಷಿತ್-ರುಕ್ಮಿಣಿ: ಹೇಗಿರುತ್ತೆ ಸಪ್ತ ಸಾಗರದಾಚೆ ಎಲ್ಲೋ ಪ್ರಪಂಚ..?

ಪ್ರೇಮ, ಪ್ರಣಯ, ದುರಂತಗಳ ಹೂರಣ..!
'ಸಪ್ತ ಸಾಗರದಾಚೆ ಎಲ್ಲೋ' ಟ್ರೈಲರ್ ರಿಲೀಸ್!
ಮತ್ತೆ ಗೆಲ್ಲುತ್ತಾರಾ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.?
ಹೇಮಂತ್ ಎಂ ರಾವ್ ನಿರ್ದೇಶನದ ಸಿನಿಮಾ.!

Share this Video
  • FB
  • Linkdin
  • Whatsapp

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಮತ್ತೊಂದು ಕುಸುರಿ ಸಪ್ತ ಸಾಗರದಾಚೆ ಎಲ್ಲೋ. ಈ ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರಿಗೆ ಅದರಲ್ಲೂ ಯುವ ಪ್ರೇಮಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಯಾಕಂದ್ರೆ ಇದೊಂದು ಅದ್ಭುತ ಪ್ರೇಮಕಾವ್ಯ. ಈ ಪ್ರೇಮದ ಕತೆಗೆ ನಾಯಕ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಾಸಂತ್.. ಇದೀಗ ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ರಿಲೀಸ್(Sapta Sagaradaache Yello) ಆಗಿದೆ. ಕಡಲ ತಡಿಯಲ್ಲಿ ಪ್ರೀತಿಯ ಅಮಲಿನಲ್ಲಿ ರಕ್ಷಿತ್-ರುಕ್ಮಿಣಿ ಕಂಗೊಳಿಸಿದ್ದಾರೆ. ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿಯ ಕಥೆಗಾರ ಹೇಮಂತ್ ಎಂ ರಾವ್ ಕಲ್ಪನೆಯೆ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ.. ಎರಡು ಭಾಗದಲ್ಲಿ ಬರ್ತಾ ಇರೋ ಈ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಪ್ರೇಮ, ಪ್ರಣಯ, ದುರಂತಗಳ ಹೂರಣ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿದೆ ಅಂತ ಟ್ರೈಲರ್‌ನಲ್ಲೇ(Trailer) ಗೊತ್ತಾಗುತ್ತೆ. ಹೀಗಾಗಿ ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಟ್ರೈಲರ್‌ನನ್ನ ಪ್ರೇಕ್ಷಕರ ಮಡಿಲಿಗರ್ಪಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Today Horoscope: ಇಂದು ಈ ರಾಶಿಯವರಿಗೆ ಅನಗತ್ಯ ವಿಚಾರಗಳಿಂದ ತೊಂದರೆ ಸಾಧ್ಯತೆ

Related Video