Asianet Suvarna News Asianet Suvarna News

63ನೇ ಹುಟ್ಟುಹಬ್ಬ ಆಚರಿಸಿಕೊಂಡ ರವಿಚಂದ್ರನ್ !ಹೊಸ ‘ಪ್ರೇಮಲೋಕ’ ಸೃಷ್ಟಿಸೋ ಭರವಸೆ ಕೊಟ್ಟ ರವಿಮಾಮ!

63ನೇ ವಸಂತಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
ರಾಜಾಜಿನಗರ ನಿವಾಸದಲ್ಲಿ ರವಿಚಂದ್ರನ್ ಬರ್ತ್‌ಡೇ!
ಕ್ರೇಜಿಸ್ಟಾರ್ ಮೇಲಿನ ಕ್ರೇಜ್‌ಗೆ ಸಾಕ್ಷಿ ಈ ಹುಟ್ಟುಹಬ್ಬ!
 

ಸ್ಯಾಂಡಲ್‌ವುಡ್‌ನ(Sandalwood) ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಹುಟ್ಟುಹಬ್ಬದ(Birthday) ಖುಷಿಯಲ್ಲಿದ್ದಾರೆ. ರವಿಮಾಮ 63ನೇ ಬರ್ತ್‌ ಡೇ ಆಚರಿಸಿಕೊಂಡಿದ್ದಾರೆ. ಹೀಗಾಗಿ ರವಿಚಂದ್ರನ್ ತನ್ನ ಡೈ ಹಾರ್ಡ್ ಅಭಿಮಾನಿಗಳ ಜೊತೆ ಬರ್ತ್‌ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ರಾಜಾಜಿನಗರದ ತಮ್ಮ ನಿವಾಸದಲ್ಲಿ ಕನಸುಗಾರ ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ರವಿ ಚಂದ್ರನ್ ಸಿನಿಮಾ ಲಿಸ್ಟ್‌ನಲ್ಲಿ ನೂರರ ಗಡಿದಾಟಿಯಾಗಿದೆ. ಅವರ ದೇಹ ಮಾಗ್ತಿದೆ. ಆದ್ರೆ ಅವರ ಸಿನಿಮಾಗಳಿಗೆ, ಅವ್ರು ಸೃಷ್ಟಿಸಿರೋ ಪ್ರೇಮ ಕಥೆಗಳಿಗೆ ಮಾತ್ರ ವಯಸ್ಸು ಅನ್ನೋದು ಹತ್ತಿರಾನು ಸುಳಿಯೋದಿಲ್ಲಾ. ಸದ್ಯ, ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತಮ್ಮ ಮಗನಿಗಾಗಿ ಮತ್ತೊಂದು ಪ್ರೇಮಲೋಕ ಸೃಷ್ಟಿಸಲು ಕೂಡ ರೆಡಿಯಾಗಿದ್ದಾರೆ. ಒಟ್ಟಿನಲ್ಲಿ ಕ್ರೇಜಿಸ್ಟಾರ್ ಅಂದ್ರೆ ಕ್ರೇಜ್ ಅನ್ನೋದಕ್ಕೆ ನಿನ್ನೆ ಅವರ ಮನೆ ಮುಂದೆ ಬಂದಿದ್ದ ಅಭಿಮಾನಿಗಳೇ ಸಾಕ್ಷಿ.

ಇದನ್ನೂ ವೀಕ್ಷಿಸಿ:  ರಾಕಿಂಗ್ ಸ್ಟಾರ್ ಯಶ್ ಕೀರ್ತಿ ಪತಾಕೆಗೆ ಮತ್ತೊಂದು ಗರಿ! ಆ ಲಿಸ್ಟ್‌ನಲ್ಲಿ ಮತ್ತೆ ಟಾಪ್‌ಗೆ ಬಂದ ನ್ಯಾಷನಲ್ ಸ್ಟಾರ್..!

Video Top Stories