ಬಾಲಿವುಡ್ ತೊರೆದೇ ಬಿಟ್ರಾ ಸಂಜು ಬಾಬಾ: ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಅಧಿರಾ..!
ಲಿಯೋ, ಡಬಲ್ ಇಸ್ಮಾರ್ಟ್ ನಲ್ಲೂ ಇವರೇ ವಿಲನ್!
ಕನ್ನಡ, ತೆಲುಗು, ತಮಿಳುನಲ್ಲಿ ಸಂಜು ಕಮಾಲ್!
ಕೆಡಿಯಲ್ಲಿ ಧ್ರುವನ ಎದುರು ಸಂಜಯ್ ದತ್ ದರ್ಬಾರ್!
ಸಂಜಯ್ ದತ್.. ಬಾಲಿವುಡ್ ಚಿತ್ರ ಜಗತ್ತಿನ ದೈತ್ಯ ಪ್ರತಿಭೆ. 1971ರಲ್ಲಿ ಚೈಲ್ಡ್ ಆಕ್ಟರ್ ಆಗಿ ಬಾಲಿವುಡ್ ಪ್ರವೇಶಿಸಿದ್ದ ಸಂಜಯ್ ದತ್(Sanjay Dutt) 1981ರಲ್ಲಿ ರಾಕಿ ಸಿನಿಮಾದಿಂದ ಹೀರೋ ಆಗಿ ಬಿಟೌನ್ನಲ್ಲಿ ರಾಕೇಟ್ ಹಾರಿಸಿದ್ರು. ಕಳೆದ 50 ವರ್ಷಗಳಿಂದ ಹಿಂದಿ ಚಿತ್ರರಂಗದ ಅಸೆಟ್ ಆಗಿರೋ ಸಂಜು ಬಾಬ ಈಗ ಬಾಲಿವುಡ್ಗೆ(Bollywood) ಗುಡ್ಬೈ ಹೇಳ್ಬಿಟ್ರಾ.? ಇಂತದ್ದೊಂದು ಡೌಟ್ ಸಂಜು ಫ್ಯಾನ್ಸ್ಗೆ ಹುಟ್ಟಿದೆ. ಯಾಕಂದ್ರೆ ಬಿಟೌನ್ ದಾದ ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಸಂಜಯ್ ದತ್ ಡ್ರಗ್ ಕೇಸ್‌ನಲ್ಲಿ ಅಂದರ್ ಆಗಿ ಕಂಬಿ ಎಣಿಸಿ ಬಂದ್ಮೇಲೆ ಸಿನಿಮಾ ಖರಿಯರ್ ಮುಗೀತು ಅಂತ ಎಲ್ರು ಮಾತಾಡಿದ್ರು. ಆದ್ರೆ ಬಿಟೌನ್ ಬಾಬನ ಅದೃಷ್ಠ ಸೂಪರ್ ಆಗಿತ್ತು. ದಕ್ಷಿಣ ಭಾರತ ಸಿನಿಮಾ(South cinema industry) ರಂಗದಲ್ಲಿ ಸಂಜಯ್ ದತ್ಗೆ ಹೊಸಾ ಲೈಫ್ ಸಿಕ್ತು. ಕನ್ನಡಿಗರ ಚಿನ್ನದ ಸಿನಿಮಾ ಕೆಜಿಎಫ್ ಕೋಟೆಗೆ ಅಧೀರನಾಗಿ ಎಂಟ್ರಿ ಕೊಟ್ಟೇ ಬಿಟ್ರು. ಇಲ್ಲಿಂದ ಸೌತ್ನಲ್ಲಿ ಸಂಜಯ್ ದತ್ ಹವಾ ಫುಲ್ ಜೋರಾಯ್ತು. ಈಗ ಈ ಅಧಿರಾ ದಕ್ಷಿಣ ಭಾರತ ಸಿನಿಮಾಗಳಿಗೆ ಬೇಡಿಕೆಯ ವಿಲನ್ ಆಗಿದ್ದಾರೆ. ಸೌತ್ನ ಮೂರು ಭಾಷೆಯ ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ವಿವಾದ: ಕರಾವಳಿಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು