ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ವಿವಾದ: ಕರಾವಳಿಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು

ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ಉಡುಪಿ: ಹಿಂದೂ ಯುವತಿಯರ ವಿಡಿಯೋ ಪ್ರಕರಣಕ್ಕೆ(Udupi video case) ಸಂಬಂಧಿಸಿದಂತೆ ಬಿಜೆಪಿ(BJP) ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇಂದೂ ಕೂಡ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ(protest) ನಡೆಸುತ್ತಿದೆ. ಇಲ್ಲಿನ ಪುರಭವನ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ಅಲ್ಲದೇ ಈಗಿನ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಪೊಲೀಸ್‌ ಇಲಾಖೆ ಮೃದು ಧೋರಣೆ ತಾಳಿತ್ತು. ಗಂಭೀರ ಪ್ರಕರಣದ ಬಗ್ಗೆ ಸರಕಾರ ಮೃದು ಧೋರಣೆ ತಳೆದು ಒಂದು ಸಮುದಾಯದ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ವೀಕ್ಷಿಸಿ: ಲೋಕಸಭೆ ಗೆಲ್ಲಲು I.N.D.I.A ತಂತ್ರಕ್ಕೆ ಕೇಸರಿ ಪಡೆ ರಣತಂತ್ರ: ಎಷ್ಟು ಸೀಟು ಗೆಲ್ಲುತ್ತೆ ಮೋದಿ ಪಾರ್ಟಿ..?

Related Video