Asianet Suvarna News Asianet Suvarna News

ಕೊನೆಗೂ ಸಿಕ್ಕೇ ಬಿಟ್ರು 'ಏನಿಲ್ಲಾ ಏನಿಲ್ಲಾ' ಒರಿಜಿನಲ್ ಗಾಯಕಿ: 25 ವರ್ಷದ ನಂತರ ಪ್ರತ್ಯಕ್ಷ ಆದ ಗಾಯಕಿ!

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಏನಿಲ್ಲಾ ಏನಿಲ್ಲಾ ಹಾಡಿನ ಒರಿಜಿನಲ್ ಗಾಯಕಿ ಪ್ರತಿಮಾ ರಾವ್ ಎಲ್ಲಿದ್ದಾರೆಂದು ಎಲ್ಲರೂ ಹುಡುಕಾಡಿದ್ದರು. ಇದೀಗ ಪ್ರತಿಮಾ ರಾವ್ ಪ್ರತ್ಯಕ್ಷವಾಗಿದ್ದಾರೆ. 

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಏನಿಲ್ಲಾ ಏನಿಲ್ಲಾ ಹಾಡಿನ ಒರಿಜಿನಲ್ ಗಾಯಕಿ ಪ್ರತಿಮಾ ರಾವ್ ಎಲ್ಲಿದ್ದಾರೆಂದು ಎಲ್ಲರೂ ಹುಡುಕಾಡಿದ್ದರು. ಇದೀಗ ಪ್ರತಿಮಾ ರಾವ್ ಪ್ರತ್ಯಕ್ಷವಾಗಿದ್ದಾರೆ. ಸದ್ಯ ಟ್ರೆಂಡಿಂಗ್ ಸಾಂಗ್ ‘ಏನಿಲ್ಲಾ ಏನಿಲ್ಲಾ’ ಹಾಡಿನ ಒರಿಜಿನಲ್ ಹಾಡನ್ನು ಹಾಡಿದ ಗಾಯಕಿ ಪ್ರತಿಮಾ ರಾವ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾರೆ. ಇಷ್ಟೆಲ್ಲಾ ಟ್ರೆಂಡ್ ಹುಟ್ಟಿಸಿರುವ ‘ಏನಿಲ್ಲಾ ಏನಿಲ್ಲಾ’  ಜನಪ್ರಿಯತೆ ಅವರಿಗೂ ಮುಟ್ಟಿದೆ. ಮತ್ತೆ ಟ್ರೆಂಡಾಘಿರೋ ಹಾಡಿನ ಬಗ್ಗೆ ತಿಳಿದ ಪ್ರತಿಮಾ ರಾವ್ ಮತ್ತೊಮ್ಮೆ ಈ ಹಾಡನ್ನು ಹಾಡಿ ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮ ನಟನೆಯ ‘ಉಪೇಂದ್ರ’ ಸಿನಿಮಾ ಬಿಡುಗಡೆಗೊಂಡು 25 ವರ್ಷಗಳಾಗಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ‘ಏನಿಲ್ಲಾ ಏನಿಲ್ಲಾ’ ಹಾಡು ಮತ್ತೆ ಜನಪ್ರಿಯತೆಗೆ ಬಂದಿದೆ. 

ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್ ಸೇರಿದಂತೆ ಬಹುತೇಕ ಪ್ಲಾಟ್ಫಾರ್ಮ್ಗಳಲ್ಲಿ ಸದ್ಯ ‘ಕರಿಮಣಿ ಮಾಲೀಕ’ ಹಾಡು ಜನಪ್ರಿಯತೆ ಪಡೆದಿದೆ. ಆದರೆ ಇದರ ಜನಪ್ರಿಯತೆಯ ಜೊತೆಗೆ ಅನೇಕರು ಈ ಹಾಡನ್ನು ಹಾಡಿರುವ ಸಿಂಗರ್ ಯಾರೆಂದು ಹುಡುಕಾಡಿದ್ದಾರೆ. ಆದರೆ  ಉಪೇಂದ್ರ ಸಿನಿಮಾದ ಏನಿಲ್ಲಾ ಹಾಡನ್ನು ಗಾಯಕ ಗುರುಕಿರಣ್ ಹಾಡಿದರೆ, ಗಾಯಕಿ ಪ್ರತಿಮಾ ರಾವ್ ಕಂಠದಲ್ಲಿ ಅಂದು ಈ ಹಾಡು ಅದ್ಭುತವಾಗಿ ಮೂಡಿಬಂದಿತ್ತು. ಇಷ್ಟೆಲ್ಲಾ ಹಾಡು 2024ರಲ್ಲಿ ಜನಪ್ರಿಯತೆ ಪಡೆದರು ಪ್ರತಿಮಾ ರಾವ್ ಸುಳಿವು ಸಿಕ್ಕಿರಲಿಲ್ಲ.  ಅದಕ್ಕೆ ಕಾರಣ ಪ್ರತಿಮಾ ರಾವ್ ಆಸ್ಟ್ರೆಲಿಯಾದ ಸಿಡ್ನಿಯಲ್ಲಿ ವಾಸವಾಗಿದ್ದಾರೆ. ತಮ್ಮ ಹೆಸರನ್ನು ರಾಧಿಕಾ ರಾವ್ ಎಂದು ಬದಲಾಯಿಸಿಕೊಂಡಿದ್ದಾರೆ. ಸದ್ಯ ಅವರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಹುಡುಕಾಟ ನಡೆಸುತ್ತಿದ್ದಾರೆ. ಕೊನೆಗೂ ಸಿಡ್ನಿಯಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿರೋದಲ್ಲದೆ ಪ್ರತಿಮಾ ರಾವ್ ಮತ್ತೊಮ್ಮ ಹಾಡು ಹಾಡಿದ್ದಾರೆ.

Video Top Stories