'ನಮೋ ಭೂತಾತ್ಮ 2'ಗೆ ಸ್ಯಾಂಡಲ್‌ವುಡ್ ನಟರ ಸಾಥ್: ಸಿನಿಮಾ ಬಗ್ಗೆ ಸೆಲೆಬ್ರೆಟಿಗಳು ಹೇಳಿದ್ದೇನು ?
ಮುರಳಿ ಮಾಸ್ಟರ್ ನಿರ್ದೇಶನದ ನಮೋ ಭೂತಾತ್ಮ 2 ಸಿನಿಮಾ ಥಿಯೇಟರ್‌ನಲ್ಲಿ ಕಮಾಲ್ ಮಾಡಲು ಶುರುವಾಗಿದೆ.
ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಕಾಮಿಡಿ ಕಿಂಗ್ ಕೋಮಲ್(Komal) ಕಮಾಲ್ ಮಾಡಿ ನಾಲ್ಕು ವರ್ಷ ಕಳೆದಿದೆ. ಕೆಂಪೇಗೌಡ 2 ಕೋಮಲ್ ನಟನೆಯ ಕೊನೆ ಸಿನಿಮಾವಾಗಿತ್ತು. ಇದೀಗ ಕೋಮಲ್ ನಟನೆಯ ನಮೋ ಭೂತಾತ್ಮ2 ಸಿನಿಮಾ (Namo Bhootatma 2) ಶುಕ್ರವಾರ ಬಿಡುಗಡೆಯಾಗಿದ್ದು, ಇದರ ಬಗ್ಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ. ಈ ಸಿನಿಮಾ ಬಗ್ಗೆ ಸಿನಿ ದುನಿಯಾದ ಸೆಲೆಬ್ರೆಟಿಗಳು ಸಹ ಮಾತನಾಡಿದ್ದರು. ಈ ಬಗ್ಗೆ ನಟ ಪ್ರಜ್ವಲ್ ದೇವರಾಜ್(prajwal devaraj) ಮಾತನಾಡಿ, ಹಾರರ್ ಸಿನಿಮಾದಲ್ಲೂ ನಗಬಹುದು ಎಂಬುದನ್ನು ಈ ಸಿನಿಮಾದಿಂದ ತಿಳಿಯಿತು ಎಂದು ಹೇಳಿದರು. ಇನ್ನೂ ನಟ ಕೋಮಲ್ ಮಾತನಾಡಿ, ಇದೊಂದು ಉತ್ತಮ ಮನರಂಜೆ, ಹಾರರ್ ಸಿನಿಮಾವಾಗಿದೆ ಎಂದರು. ಈ ಸಿನಿಮಾಗೆ ವಿನೋದ್ ಪ್ರಭಾಕರ್ ಕೂಡ ಶುಭಹಾರೈಸಿದರು.
ಇದನ್ನೂ ವೀಕ್ಷಿಸಿ: ನಕ್ಕು ನಗಿಸಿದ ನಮೋ ಭೂತಾತ್ಮ 2 : ಸಿನಿಮಾ ಹೆದರಿಸುತ್ತೆ..ನಗಿಸುತ್ತೆ ಎಂದ ಜನ