
ಯಶ್ ಮನೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ: ಸಂಕ್ರಾಂತಿ ರತ್ತೋ ಎಂದ ಶ್ರೀಲೀಲಾ, ಮಯೂರಿ
ಸಂಕ್ರಾಂತಿ ಹಬ್ಬವನ್ನು ನಮ್ಮ ಸ್ಯಾಂಡಲ್ ವುಡ್ ತಾರೆಯರು ಭರ್ಜರಿಯಾಗಿ ಆಚರಿಸಿದ್ದು, ಅದರ ಝಲಕ್ ಇಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿರೋ ತಮ್ಮ ಫಾರ್ಮ್ ಹೌಸ್'ನಲ್ಲಿ ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಮೇತ ಆಚರಣೆ ಮಾಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಸುಗ್ಗಿ ಹಬ್ಬದಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಯಥರ್ವ್, ಐರಾ ಹಾಗೂ ಯಶ್ ತಂದೆ-ತಾಯಿ ಭಾಗಿ ಆಗಿದ್ದಾರೆ. ಇಡೀ ಫ್ಯಾಮಿಲಿ ಟ್ರ್ಯಾಕ್ಟರ್ ಏರಿ ತಮ್ಮ ಜಮೀನಿನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಇದರ ಜೊತೆಗೆ ಕಿಸ್ ಚೆಲುವೆ ಶ್ರೀಲೀಲಾ ಕೂಡ ವಿಶೇಷವಾಗಿ ಸಂಕ್ರಾಂತಿ ಆಚರಿಸಿದ್ದಾರೆ. ಹಾಗೂ ನಟಿ ಮಯೂರಿ ಈ ಭಾರಿ ಸಂಕ್ರಾಂತಿಯನ್ನ ಭಾರಿ ಜೋರಾಗಿ ಆಚರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ