'ಅಪ್ಪು ಅಪ್ಪುಗೆಯೇ ಅವರ ಶಕ್ತಿ.. ಹೊಸ ಪ್ರಾಜೆಕ್ಟ್ ಸಿದ್ಧ ಮಾಡಿಕೊಂಡಿದ್ರು'
* ಚಿತ್ರರಂಗ ತೊರೆದ ದೊಡ್ಡ ಮನೆಯ ಹುಡುಗ
* ಅಪ್ಪು ಜತೆಗಿನ ಬಾಮಧವ್ಯ ಸ್ಮರಿಸಿದ ಉಪೇಂದ್ರ
* ಹೊಸದೊಂದು ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದರು
* ಎಲ್ಲರೂ ಮುಂದೆ ಒಟ್ಟಾಗಿ ಸಾಗಬೇಕಿದೆ
ಬೆಂಗಳೂರು(ಅ. 30) ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ (Puneeth Rajkumar) ನಂತರ ದೊಡ್ಡದೊಂದು ಶೂನ್ಯ ಆವರಿಸಿದೆ. ಸ್ಯಾಂಡಲ್ ವುಡ್ (sandalwood)ನಟರು, ಟಾಲಿವುಡ್ ಮತ್ತು ಬಾಲಿವುಡ್ ಸ್ನೇಹಿತರು ಪುನೀತ್ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ರಿಯಲ್ ಸ್ಟಾರ್, ನಿರ್ದೇಶಕ ಉಪೇಂದ್ರ(Upendra) ಪುನೀತ್ ಅವರ ಬಾಂಧವ್ಯ ಮೆಲುಕು ಹಾಕಿದ್ದಾರೆ. ಇಡೀ ಭಾರವತೇ ಒಪ್ಪಿಕೊಳ್ಳಲಾರದ ಶಾಕಿಂಗ್ ಸುದ್ದಿ ಇದೆ. ಶಿವಣ್ಣ ಪುನೀತ್ ಅವರನ್ನು ನನಗೆ ಪರಿಚಯ ಮಾಡಿಸಿದ್ದರು. ಅವರ ಡ್ಯಾನ್ಸ್ ನೋಡಿ ಅಲ್ಲಿಯೇ ಫಿದಾ ಆಗಿದ್ದೆ ಎಂದು ಉಪ್ಪಿ ಹೇಳಿದರು.