ತೆರೆ ಮೇಲೆ ಬಂತು ಬೆಂಗಳೂರು ಕರಗದಲ್ಲಾದ ರಕ್ತ ಚರಿತ್ರೆ! 80ರ ದಶಕದಲ್ಲಿ ನಡೆಯೋ ಸ್ಟೋರಿ ಈ ಸಿನಿಮಾ !

ಕರಗ ಬೆಂಗಳೂರು ವೈಭವಕ್ಕೆ ಮತ್ತೊಂದು ಸಾಕ್ಷಿ. ಈ ಕಗರ ಆಚರಣೆಯಿಂದ ಸ್ಯಾಂಡಲ್‌ವುಡ್‌ಗೆ ಹಲವು ಸ್ಟೋರಿಗಳು ಸಿಕ್ಕಿವೆ. ಇದೀಗ ಇದೇ ಬೆಂಗಳೂರು ಕರಗದ ಬ್ಯಾಕ್‌ಡ್ರಾಪ್‌ನಲ್ಲೇ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬಂದಿದೆ. ಅದೇ ಕೈವ.

First Published Dec 11, 2023, 10:18 AM IST | Last Updated Dec 11, 2023, 10:18 AM IST

ಕೈವ.. ಟೀಸರ್ ಟ್ರೈಲರ್‌ನಿಂದ ಈ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನ ಹುಟ್ಟುಹಾಕಿತ್ತು. ಇದೀಗ ಕೈವ ಸಿನಿಮಾ(Kaiva movie) ರಾಜ್ಯಾದ್ಯಂತ ರಿಲೀಸ್ ಆಗಿದೆ. ಬೆಂಗಳೂರು(Bengaluru) ಕರಗದಲ್ಲಾದ ಪ್ರೇಮಕತೆಯೊಂದು ರಕ್ತ ಚರಿತ್ರೆಯಾಗಿ ಬದಲಾಗುವ ಸ್ಟೋರಿಯನ್ನ ಈ ಸಿನಿಮಾದಲ್ಲಿ ಸೃಷ್ಟಿಸಲಾಗಿದೆ. ಕರಗ ಬೆಂಗಳೂರಿಗರ ಬದುಕಿನ ಭಾಗ. ಇದೇ ಕರಗದ ಹಿನ್ನೆಲೆಯನ್ನೇ ಸಾಗೋ ಕತೆ ಕೈವ ಸಿನಿಮಾ. 80ರ ದಶಕದಲ್ಲಿ ರೆಟ್ರೋ ಸ್ಟೈಲ್‌ನಲ್ಲಿ ಸಿನಿಮಾವನ್ನ ಕಟ್ಟಿಕೊಡಲಾಗಿದೆ. ಕೈವದ ಲವ್ ಕಮ್ ಬ್ಲಡ್ ಸ್ಟೋರಿಗೆ ಬೆಲ್ ಬಾಟಂ ನಿರ್ದೇಶಕ ಜಯತೀರ್ಥ(Jayatheertha) ಆಕ್ಷನ್ ಕಟ್ ಹೇಳಿದ್ದಾರೆ. 80ರ ದಶಕದ ಬೆಂಗಳೂರಿನ ಚಿತ್ರಣ ಈ ಸಿನಿಮಾದಲ್ಲಿದ್ದು, ಅಂದಿನ ಹಿಂದು ಹುಡುಗ ಮುಸ್ಲಿಂ ಹುಡುಗಿಯ ಲವ್ ಸ್ಟೋರಿಯನ್ನ ನಿರ್ದೇಶಕ ಜಯತೀರ್ಥ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಅದ್ಭುತ ಸಿನಿಮಾ ಅಂತ ಕೊಂಡಾಡುತ್ತಿದ್ದಾರೆ. ಕೈವ ನಟ ಧನ್ವಿರ್(actor dhanveer) ಸಿನಿ ಕರಿಯರ್‌ನ ವಿಭಿನ್ನ ಸಿನಿಮಾ. ಈ ಸಿನಿಮಾದಲ್ಲಿ ಹೀರೋ ಧನ್ವೀರ್ ವೀರಕುಮಾರನಾಗಿ ನಟಿಸಿದ್ದಾರೆ. 80ರ ದಶಕದ ರೆಟ್ರೋ ಸ್ಟೈಲ್ನಲ್ಲಿ ಹಿಂದು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಆ ಕಡೆ ಕ್ಯೂಟಿ ಮೇಘಾ ಶೆಟ್ಟಿ(Megha Shetty) ಮುಸ್ಲಿಂ ಹುಡುಗಿ ರೋಲ್ ಮಾಡಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ರಕ್ತ ಚರಿತ್ರೆಯಾಗಿ ಬದಲಾಗೋದೇ ಸಿನಿಮಾದ ಇಂಟ್ರೆಸ್ಟಿಂಗ್ ಕತೆ. ಧನ್ವೀರ್ ಹಾಗು ಮೇಘಾ  ಈ ಸಿನಿಮಾವನ್ನ ಪ್ರೇಕ್ಷಕರ ಮಧ್ಯೆ ಕೂತು ನೋಡಿದ್ರು.ಕೈವ ಸಿನಿಮಾ ನೋಡೋಕೆ ಬೆಂಗಳೂರಿನ ಅನುಪಮ ಚಿತ್ರಮಂದಿರಕ್ಕೆ ನಟ ಅಭಿಷೇಕ್ ಅಂಬರೀಶ್ ಕೂಡ ಬಂದಿದ್ರು. ಅಭಿ ಜೊತೆ ಉಪಾಧ್ಯಕ್ಷ ಚಿಕ್ಕಣ ಕೂಡ ಕೈವ ಸಿನಿಮಾ ನೋಡಿದ್ರು. 

ಇದನ್ನೂ ವೀಕ್ಷಿಸಿ:  ಹಾನಿಕಾರಕ ವಿಷ ಪ್ರಪಂಚದಲ್ಲಿ ಮಾನ್ಸ್ಟರ್ ಯಶ್! ಆಸ್ಕರ್ ಮೇಲೆ ಕಣ್ಣಿಟ್ರಾ ರಾಜಾಹುಲಿ!