Asianet Suvarna News Asianet Suvarna News

ದರ್ಶನ್ ನಾಯಕ್ ನಹಿ ಖಳ ನಾಯಕ್: ನಟನ ರಿಯಲ್ ಸ್ಟೋರಿಯನ್ನ ಸಿನಿಮಾ ಮಾಡುತ್ತಾ ಸ್ಯಾಂಡಲ್‌ವುಡ್?

ದರ್ಶನ್‌ನ ಕೆಟ್ಟ ಕಲಸಗಳು ಒಂದೆರಡಲ್ಲ ಹಾಗಂತ ಜೈಲಿಗೆ ಹೋಗಿದ್ದು ಇದೇ ಮೊದಲಲ್ಲ ಹನ್ನೊಂದು ವರ್ಷದ ಹಿಂದೆಯೇ ಹೆಂಡತಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿ ಹೊರ ಬಂದಿದ್ರು. 

ಕನ್ನಡದ ಸ್ಟಾರ್ ನಟ ಈಗ ಅಕ್ಷರಶ ಕಳ ನಾಯಕ. ಕತರ್ನಾಕ್ ಡಿ ಗ್ಯಾಂಗ್ ನ ಹೆಡ್.. ಕೋಟ್ಯಾಂತರ ಮಂದಿಗೆ ಸ್ಪೂರ್ತಿ ಆಗಬೇಕಾಗಿದ್ದ ದರ್ಶನ್ ಈಗ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ. ರೀಲ್ ನ ಈ ನಾಯಕ ರೀಯಲ್ ನಲ್ಲಿ ಖಳನಾಯಕ . ಈ ಖಳನಾಯಕನ ಹಿಂದೆ ಬಿದ್ದಿದೆ ಸ್ಯಾಂಡಲ್ ವುಡ್.  ಆತನ ಕೆಟ್ಟ ಕೆಲಸಗಳನ್ನೇ ಸಿನಿಮಾ ಮಾಡಲು ಹೊರಟಿದೆ ಗಾಂಧಿನಗರ. ದರ್ಶನ್ .. ಜೆಸ್ಟ್ ಕೆಲವೇ ಕೆಲವು ದಿನಗಳ ಹಿಂದೆ ಕನ್ನಡದ ಮಹಾನ್ ನಾಯಕನಗಿದ್ರು. ಆದ್ರೆ ಅದೊಂದು ಕೇಸ್ ದರ್ಶನ್ ನ ಮತ್ತೊಂದು ಮುಖವನ್ನ ಬಿಚ್ಚಿಟ್ಟಿತ್ತು. ಅವರೇ ವೇಧಿಕೆ ಮೇಲೆ ಹೇಳಿದಂತೆ ಅವರ ಮತ್ತೊಂದು ಮುಖವನ್ನ ಜಗತ್ತಿಗೆ ಪರಿಚಯಿಸಿತ್ತು ರೇಣುಕಾ ಸ್ವಾಮಿಯ ಕೊಲೆ. ರೇಣುಕಾ ಸ್ವಾಮಿ ಜೀವ ತೆಗೆದ ಕಿಲ್ಲಿಂಗ್ ಸ್ಟಾರ್ ಅಕ್ಷರಶಹ ವಿಲನ್ ಆಗ್ಬಿಟ್ಟಿದ್ದಾರೆ. ದರ್ಶನ್ ಅಂದ್ರೆ ಭಯ. ಆತಂಕ. ಕೋಪ. ದರ್ಶನ್ ಅಂದ್ರೆ ತೀರದ ಸಿಟ್ಟು. ಛೇ ಇವನು ಒಬ್ಬ ಹೀರೋನಾ..? 

ಇವನನ್ನೇ ನಾವು ಆರಾಧಿಸಿದ್ವಾ ಅನ್ನೋ ಬೇಸರ ಆವರ ಅಭಿಮಾನಿಗಳದ್ದು. ದರ್ಶನ್ ನ ಕೆಟ್ಟ ಕಲಸಗಳು ಒಂದೆರಡಲ್ಲ ಹಾಗಂತ ಜೈಲಿಗೆ ಹೋಗಿದ್ದು ಇದೇ ಮೊದಲಲ್ಲ ಹನ್ನೊಂದು ವರ್ಷದ ಹಿಂದೆಯೇ ಹೆಂಡತಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿ ಹೊರ ಬಂದಿದ್ರು. ಇದನ್ನ ಜನ ಹೋಗ್ಲಿ ಬಿಡು ನಮ್ಮಲ್ಲೇ ಆಗೋದು ಎಲ್ಲರ ಮನೆ ದೋಸೆ ತೂತು ಅಂಥ ಮತ್ತೆ ದರ್ಶನ್ ನ ಆರಾಧಿಸೋಕೆ ಶುರು ಮಾಡಿದ್ರು. ಹಾಗಂತ ದರ್ಶನ್ ಆರ್ಭಟ ನಿಲ್ಲಲಿಲ್ಲ. ಎಲ್ಲಾರ ಮೇಲೆ ಎರಗೋಕೆ ಶುರು ಮಾಡಿದ್ರು ಅವರ ಆಪ್ತ ವಲಯ ಹೇಳುವಂತೆ ದರ್ಶನ್ ಕುಡಿದಾಗ ಮನುಷ್ಯ ಅಲ್ಲ ರಾಕ್ಷಸನಂತೆ. ಅಫ್ ಕೋರ್ಸ್ ರಾಕ್ಷಸನಂತೆ ವರ್ತಿಸೋಕೆ ಶುರು ಮಾಡಿದ್ರು. ತನ್ನ ಆಪ್ತರ ಮೇಲೆ ಕುಡಿದಾಗ ಕೈ ಮಾಡೋದು. ತೋಟದಲ್ಲಿ ಕೆಲಸ ಮಾಡೋರ ಮೇಲೆ ಎರಗೋದು ಅಷ್ಟೆ ಯಾಕೆ ಮೈಸೂರಿನ ಹೋಟೆಲ್ ಒಂದರ ವೇಟರ್ ಮೇಲೆ ಕೈ ಮಾಡಿ ಸುದ್ದಿಯಾಗಿದ್ರು. 

ದರ್ಶನ್ ಬಗ್ಗೆ ಹೇಳ್ತಾ ಹೋದ್ರೆ ದೊಡ್ಡ ಸಿನಿಮಾ ಆಗುತ್ತೆ ಅಫ್ ಕೋರ್ಸ್ ದರ್ಶನ್ ರ ಈ ರಿಯಲ್ ಕತೆಗಳು ಯಾವುದೇ ಸಿನಿಮಾಗೂ ಕಡಿಮೆ ಇಲ್ಲ ಹಾಗಾಗಿ ರೇಣುಕಾ ಸ್ವಾಮಿ ಕೊಂದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೆರಿರೋ ದರ್ಶನ್ ಮೇಲೆ ಸಿನಿಮಾ ಮಾಡಲು ಕನ್ನಡ ಚಿತ್ರರಂಗದ ಮಂದಿಯೇ ತಾ ಮುಂದು ನಾ ಮುಂದು ಅನ್ನುತ್ತಿದ್ದಾರೆ. ವಿಶೇಷ ಅಂದ್ರೆ ದರ್ಶನ್ ರ ಆಪ್ತ ನಿರ್ದೇಶಕರೇ ಸಿನಿಮಾಗೆ ಕೈ ಹಾಕಿರೋದು ಅದು ಮತ್ಯಾರು ಅಲ್ಲ ಡೇರಿಂಗ್ ಅ್ಯಂಡ್ ಡ್ಯಾಷಿಂಗ್ ಡೈರೆಕ್ಟರ್ ಓಂ ಪ್ರಕಾಶ್ ರಾವ್. ದರ್ಶನ್ ಸಿನಿ ಕರಿಯರ್ ನಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಒಂದು ಮೈಲುಗಲ್ಲು. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳು ಹಿಟ್ ಆಗಿವೆ. ಇದೇ ನಿರ್ದೇಶಕ ಈಗ ದರ್ಶನ್ ರ ಬ್ಯಾಡ್ ಸ್ಟೋರಿಯನ್ನ ತೆರೆ ಮೇಲೆ ತರುತ್ತಿದ್ದಾರೆ ಹಾಗ್ ನೋಡಿದ್ರೆ ಸುಮಾರು ವರ್ಷದ ಹಿಂದೆಯೇ ಓಂ ಪ್ರಕಾಶ್ ಈ ತರದ ಸ್ಟೋರಿಯನ್ನ ರೆಡಿ ಮಾಡಿದ್ರಂತೆ. 

ಒಬ್ಬ ಸೂಪರ್ ಸ್ಟಾರ್ ಕೊಲೆಯಲ್ಲಿ ಸಿಕ್ಕಾಕಿಕೊಂಡು ಅದರಿಂದ ಹೇಗೆ ಹೊರಗಡೆ ಬರುತ್ತಾನೆ ಅಂತ ಕತೆಯನ್ನ ಓಂ ಪ್ರಕಾಶ್ ರಾವ್ ರೆಡಿಮಾಡಿದ್ರಂತೆ ಆ ಸಿನಿಮಾದಲ್ಲಿ ದರ್ಶನ್ ನಟಿಸಬೇಕು ಅನ್ನೋದು ಅವರ ಆಸೆ ಆಗಿತ್ತಂತೆ.ಹಾಗಾಗಿ ದರ್ಶನ್ ಗೆ ಈ ಕಥೆಯನ್ನ ಹೇಳಿದ್ದರಂತೆ. ಆದರೆ ದರ್ಶನ್ ಕತೆಗೆ ಟೈಮ್ ಅನ್ನ ತಳ್ಳಿಕೊಂಡು ಬರ್ತಾ ಇದ್ರಂತೆ. ಆದ್ರೆ ಈಗ ಅದೇ ಘಟನೆ ದರ್ಶನ್ ರ ರೀಯಲ್ ಲೈಫ್ ನಲ್ಲಿ ನಡೆದಿದೆ. ಈ ಘಟನೆ ಓಂ ಪ್ರಕಾಶ್ ರಾವ್ ಸಿನಿಮಾದಲ್ಲೂ ಇದೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಫಿನಿಕ್ಸ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಹೊಸಬರ ಸಾರಥ್ಯದಲ್ಲಿ ಬರುತ್ತಿರೋ ಈ ಕತೆಯಲ್ಲಿ ದರ್ಶನ್ ರ ರಿಯಲ್ ಕಥೆಯ ಕೆಲವು ಘಟನೆಗಳು ಸೇರಿಕೊಂಡಿವೆಯಂತೆ. ಇತ್ತ ದರ್ಶನ್ ಬದುಕಿನಲ್ಲಿ ಖಳ ನಾಯಕಿ ಆಗಿರೋ ಪವಿತ್ರಾ ಗೌಡ ಕ್ಯಾರೆಕ್ಟರ್ ನಲ್ಲಿ ದರ್ಶನ್ ರ ಆಪ್ತ ನಟಿಯೊಬ್ರು ನಟಿಸುತ್ತಿದ್ದಾರಂತೆ. 

ಈಗಾಗ್ಲೆ ಸಿನಿಮಾ ಶೂಟಿಂಗ್ ಶುರುವಾಗಿದ್ದು ದರ್ಶನ್ ಜೈಲಿನಿಂದ ರಿಲೀಸ್ ಆಗೋ ಮೊದಲೇ ಸಿನಿಮಾ ರಿಲೀಸ್ ಆದ್ರು ಆಶ್ಚರ್ಯವೇನಿಲ್ಲ. ಅಷ್ಟೆ ಅಲ್ಲ ದರ್ಶನ್ ಹೆಸರಿನ ಜೊತೆ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು ಡಿ ಗ್ಯಾಂಗ್. ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನ ಇಟ್ಟುಕೊಂಡು ಮೀಡಿಯಾ ಅದ್ಯಾವಾಗ ಡಿ ಗ್ಯಾಂಗ್ ಅಂತ ಟೈಟಲ್ ಕೊಡ್ತೊ ನೋಡಿ ಆ ಟೈಟಲ್ ಗೂ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಹಾಗಾಗಿ ಗಾಂಧಿನಗರದ ಮಂದಿ ಡಿ ಗ್ಯಾಂಗ್ ಟೈಟಲ್ ತಮ್ಮ ಹೆಸರಿಗೆ ರಿಜಿಸ್ಟರ್ ಮಾಡೋದಕ್ಕೆ ದುಂಬಾಲು ಬಿದ್ದಿದೆ. ಅದೆ ಡಿ ಗ್ಯಾಂಗ್ ಟೈಟಲ್ ಇಟ್ಟು ರೇಣುಕಾಸ್ವಾಮಿ ಕೊಲೆ ಮತ್ತು ಅದರ ಸುತ್ತ ನಡೆಯೋ ಘಟನೆಗಳನ್ನ ಇಟ್ಟುಕೊಂಡು ಸಿನಿಮಾ ಮಾಡಲು ರೆಡಿಯಾಗಿದೆಯಂತೆ ಗಾಂಧಿನಗರದ ಒಟ್ಟಿನಲ್ಲಿ ದರ್ಶನ್ ರ ಬದುಕು ಸ್ಪೂರ್ಥಿ ಆಗಬೇಕೊತ್ತು. ಆದರೆ ದುರಂತ ನಾಯಕ ಆಗಿರೋದು ಮಾತ್ರ ಅವ್ರ ಫ್ಯಾನ್ಸ್ ಗೆ ಬೇಸರದ ಸಂಗತಿ.

Video Top Stories