Asianet Suvarna News Asianet Suvarna News

ಸ್ಟಾರ್ ರೇಂಜ್‌ನಲ್ಲಿ ಕಲೆಕ್ಷನ್ ಮಾಡಿದ ಚಿಕ್ಕಣ್ಣ ಉಪಾಧ್ಯಕ್ಷ: ಸಿನಿಮಾ ಸೆಲೆಬ್ರೆಟಿಗಳು ಮೆಚ್ಚಿಕೊಂಡಾಡಿದ್ರು!

ಸ್ಟಾರ್ ಹೀರೋಗಳ ಪಕ್ಕ ಫ್ರೆಂಡ್ ಆಗಿ ಯಾವಾಗಲೂ ನಕ್ಕು ನಗಿಸುತ್ತಿದ್ದ ಚಿಕ್ಕಣ್ಣ ಹಾಸ್ಯ ನಟನಾಗಿ ಹಲವಾರು ಸಿನಿಮಾದಲ್ಲಿ ನಟಿಸಿದ್ದಾಗಿದೆ. ಇದೆ ಮೊದಲ ಬಾರಿಗೆ ಚಿಕ್ಕಣ್ಣ ಹೀರೋ ಆಗಿ ನಟಿಸಿದ ಉಪಾಧ್ಯಕ್ಷ ಗೆದ್ದಿದೆ. ಕಲೆಕ್ಷನ್ ವಿಚಾರದಲ್ಲಂತೂ ಸ್ಟಾರ್ ಹೀರೋಗಳ ರೇಂಜಿಗೆ ಕಲೆಕ್ಷನ್ ಆಗಿದೆ. 

ಸ್ಟಾರ್ ಹೀರೋಗಳ ಪಕ್ಕ ಫ್ರೆಂಡ್ ಆಗಿ ಯಾವಾಗಲೂ ನಕ್ಕು ನಗಿಸುತ್ತಿದ್ದ ಚಿಕ್ಕಣ್ಣ ಹಾಸ್ಯ ನಟನಾಗಿ ಹಲವಾರು ಸಿನಿಮಾದಲ್ಲಿ ನಟಿಸಿದ್ದಾಗಿದೆ. ಇದೆ ಮೊದಲ ಬಾರಿಗೆ ಚಿಕ್ಕಣ್ಣ ಹೀರೋ ಆಗಿ ನಟಿಸಿದ ಉಪಾಧ್ಯಕ್ಷ ಗೆದ್ದಿದೆ. ಕಲೆಕ್ಷನ್ ವಿಚಾರದಲ್ಲಂತೂ ಸ್ಟಾರ್ ಹೀರೋಗಳ ರೇಂಜಿಗೆ ಕಲೆಕ್ಷನ್ ಆಗಿದೆ. ಅನ್ನೋದು ನಿಜಕ್ಕೂ ಸಂತಸದ ವಿಚಾರ. ಅನಿಲ್ ನಿರ್ದೇಶನ ಹೆಬ್ಬುಲಿ ರಾಬರ್ಟ್ ನಿರ್ಮಾಪಕ ಉಮಾಪತಿ ನಿರ್ಮಾಣದ  ಚಿಕ್ಕಣ್ಣ ಮತ್ತು ಮಲೈಕಾ ಜೋಡಿಯಾಘಿ ನಟಿಸಿದ ಸಂಪೂರ್ಣ ಹಾಸ್ಯಮಯ ಸಿನಿಮಾ ಉಪಾಧ್ಯಕ್ಷ..ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಬಾಚಿಕೊಂಡಿದ್ದಾನೆ ಉಪಾಧ್ಯಕ್ಷ. ಚಿತ್ರತಂಡ ಅಧಿಕೃತ ಮಾಹಿತಿಯ ಪ್ರಕಾರ ಉಪಾಧ್ಯಕ್ಷ ಸಿನಿಮಾ ಮೂರು ದಿನಗಳಲ್ಲಿ 5 ಕೋಟಿ 27 ಲಕ್ಷ ಕಲೆಕ್ಷನ್ ಮಾಡಿದೆ. ಮೊದಲ ದಿನ 1 ಕೋಟಿ 31 ಲಕ್ಷ, ಎರಡನೇ ದಿನ 1 ಕೋಟಿ 63 ಲಕ್ಷ, ಮೂರನೇ ದಿನವಾದ ಭಾನುವಾರ 2 ಕೋಟಿ 33 ಲಕ್ಷ ಕಲೆಕ್ಷನ್ ಮಾಡಿದೆ. ಈ ಮೂಲಕ ಸ್ಟಾರ್ ಹೀರೋಗಳ ರೇಂಜಿನಲ್ಲಿ ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾ  ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ.