Asianet Suvarna News Asianet Suvarna News

ಅಮ್ಮನ ಜೊತೆ ದೀಪ ಹಚ್ಚಿದ ನಟಿ ಆರಾಧನಾ..! ಮಗಳ ಜೊತೆ ಮಾಲಾಶ್ರೀ ದೀಪಾವಳಿ ಫೋಟೋ ಶೂಟ್..!

ರಾಧಿಕಾ ಪಂಡಿತ್. ಯಾವ್ ಹಬ್ಬನೇ ಆಗಿರ್ಲಿ ತಮ್ಮ ಮುದ್ದಿನ ಮಕ್ಕಳು ಐರಾ, ಯಥರ್ವ್ ಜೊತೆ ಒಂದ್ ಫೋಟೋ ಶೂಟ್ ಮಾಡ್ಸೆ ಇರೋಲ್ಲ. ಹಬ್ಬ ಆಚರಿಸ್ತಾನೆ ತನ್ನ ಮಕ್ಕಳಿಗೆ ನಮ್ಮ ಲಕ್ಚರ್ ಅನ್ನ ಹೇಳಿ ಕೊಡ್ತಾರೆ ರಾಧಿಕಾ. ಈಗ ಈ ಬಾರಿಯ ದೀಪಾವಳಿ ಕೂಡ ರಾಧಿಕಾ‌ ಪಂಡಿತ್ ಮಕ್ಕಳ ಜೊತೆ ಫೋಟೋ ಶೂಟ್ ಮೂಲಕ ಆಚರಿಸಿದ್ದಾರೆ.

First Published Nov 14, 2023, 8:26 PM IST | Last Updated Nov 14, 2023, 8:26 PM IST

ಬೆಂಗಳೂರು(ನ.14):  ದೇಶದೆಲ್ಲೆಡೆ ದೀಪಗಳ ಹಬ್ಬ ದೀಪಾವಳಿ. ಬದುಕಿನ ಕತ್ತಲನ್ನು ತೊಲಗಿಸಿ ಬೆಳಕು ಬರಲಿ ಎಂದು ಆಚರಿಸುವ ದೀಪಾವಳಿಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬೆಳಕಿನ ಹಬ್ಬಕ್ಕೆ ನಾಡಿನ ಜನತೆಗೆ ಚಂದನವನದ ಚಂದದ ನಟಿಯರು ಶುಭಾಶಯ ಕೋರಿದ್ದಾರೆ. ಜೆಸ್ಟ್ ಶುಭ ಕೋರಿದ್ದಷ್ಟೆ ಅಲ್ಲ. ಸ್ಪೆಷಲ್ ಫೋಟೋ ಶೂಟ್ ಮಾಡಿ ಮಿಂಚಿದ್ದಾರೆ. ಹೀರೋಯಿನ್ಸ್ ಫೋಟೋ‌ ಶೂಟ್ ನ ಝಲಕ್ ಇಲ್ಲಿದೆ.

ದೀಪಾವಳಿ ಹಬ್ಬದಲ್ಲಿ ಯುವರಾಜ್ ಕುಮಾರ್ ಯುವೋತ್ಸವ: ಬೆಳಕಿನ ಹಬ್ಬಕ್ಕೆ ಡಬಲ್ ಧಮಾಕ..!

ಕನಸಿನ ರಾಣಿ ನಟಿ ಮಾಲಾಶ್ರೀ ಮಗಳು ಆರಾಧನಾ ಜೊತೆ ದೀಪಾವಳಿ ಹಬ್ಬದಂದು ದೀಪಗಳ ಮಧ್ಯೆ ಮಿರ ಮಿರ ಅಂತ ಮಿಂಚಿದ್ದಾರೆ. ಮಗಳು ಆರಾಧನಾರನ್ನ ಸೀರೆಯಲ್ಲಿ ರೆಡಿ ಮಾಡಿರೋ ಮಾಲಾಶ್ರೀ ಸ್ಪೆಷಲ್ ಫೋಟೋ ಶೂಟ್ ಮಾಡ್ಸಿ ದೀಪಾವಳಿ ವಿಶ್ ಮಾಡಿದ್ದಾರೆ. ಆ‌ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ  ಆರಾಧನಾ. ಅಮ್ಮ ಮಗಳ ಈ ಹೊಸಾ ಲುಕ್ ನ ಫೋಟೋ ಶೂಟ್ ಗೆ ಲೈಕ್ಸ್ ಕಮೆಂಟ್ ಗಳ ಸುರಿಮಳೆ ಸಿಕ್ತಿವೆ. ಸೀರೆಯಲ್ಲಿ ಆರಾದನಾರನ್ನ ನೋಡಿದ ಕೆಲವ್ರು ದೀಪಾವಳಿ ಹಬ್ಬ ಮರೆತು ಆರಾಧನಾ ಆರಾಧನೆ ಮಾಡ್ತಾನೆ ಕಾಲ ಕಳೆಯುತ್ತಿದ್ದಾರೆ. ಹಸಿರು ಬಣ್ಣದ ಸೀರೆ. ಕೈ ತುಂಬಾ ಬಳೆ. ಹಣೆಗೊಂದು ಚಂದದ ಬೊಟ್ಟು, ಮೈ‌ ತುಂಬಾ ಒಡವೆ ಹಾಕಿ ಮಿಂಚುತ್ತಿದ್ದು ಹಬ್ಬದ ಫೀಲ್‌ ಕೊಟ್ಟಿದ್ದಾರೆ.