Asianet Suvarna News Asianet Suvarna News

ದೀಪಾವಳಿ ಹಬ್ಬದಲ್ಲಿ ಯುವರಾಜ್ ಕುಮಾರ್ ಯುವೋತ್ಸವ: ಬೆಳಕಿನ ಹಬ್ಬಕ್ಕೆ ಡಬಲ್ ಧಮಾಕ..!

ಯುವರಾಜ್ ಕುಮಾರ್ ಈಗ ಯುವ ಸಿನಿಮಾದಲ್ಲಿ ಬ್ಯುಸಿ. ಇದು ಯುವ ಸ್ಯಾಂಡಲ್ ವುಡ್ ಗೆ ಡೆಬ್ಯೂ ಆಗ್ತಿರೋ ಸಿನಿಮಾ. ಈ ಮೂವಿ ಇನ್ನು ವರ್ಕಿಂಗ್ ಪ್ರೋಗ್ರೆಸ್ ನಲ್ಲಿದೆ. ಯುವ ಸ್ಕ್ರೀನ್ ಮೇಲೆ ಹೇಗೆ ಕಾಣಿಸ್ತಾರೆ ಅನ್ನೋದನ್ನ ಇನ್ನೂ ನೋಡಿಲ್ಲ. ಯುವ ಪರ್ಫಾಮೆನ್ಸ್ ಹೇಗಿರುತ್ತೆ ಅಂತ ಜೆಸ್ಟ್ ಒಂದು ಟೀಸರ್ ನಲ್ಲಿ ಮಾತ್ರ ನೋಡಿದ್ದೇವೆ. ಅಷ್ಟರೊಳಗೆ ಯುವ ಈಗ ಮತ್ತೆರಡು ಸಿನಿಮಾಗಳಲ್ಲಿ ಲಾಕ್ ಆಗಿದ್ದಾರೆ ಅಂತ ಈ ದೀಪಾವಳಿಯಲ್ಲೆ ಆಟಂ ಬಾಂಬ್ ನಂತಹ ಸುದ್ದಿ ಹೊರ ಬಂದಿದೆ.

ಬೆಂಗಳೂರು(ನ.14): ಎಲ್ಲೆಲ್ಲೂ ದೀಪಾವಳಿ ಪಟಾಕಿ ಸೌಂಡು, ಕಲರ್ ಫುಲ್ ಲೈಟುಗಳ ಬ್ಯಾಂಡು.. ಎಲ್ಲರೂ ಈಗ ಹಬ್ಬದ ಮೂಡ್ ನಲ್ಲಿದ್ದಾರೆ. ಸ್ಯಾಂಡಲ್ ವುಡ್ ಮಂದಿ ಕೂಡ ಹಬ್ಬದ ಸಡಗರದಿಂದವ ಹಬ್ಬ ಆಚರಿಸುತ್ತಿದ್ದಾರೆ. ದೊಡ್ಮನೆ ಅಭಿಮಾನಿಗಳ ಬೆಳಕಿನ ಹಬ್ಬದ  ಖುಷಿಯನ್ನ ಡಬಲ್ ಮಾಡಿದ್ದಾರೆ ದೊಡ್ಮನೆ ಹುಡುಗ ಯುವರಾಜ್ ಕುಮಾರ್.. ಅದು ಹೇಗೆ ಗೊತ್ತಾ.? ಈ ಇಂಟ್ರೆಸ್ಟಿಂಗ್ ಸ್ಟೋರಿ ನೋಡಿ...

ರಾಮ ಮರಳಿ ಅಯೋಧ್ಯೆಗೆ ಬಂದ ದಿನವೇ ದೀಪಾವಳಿ! ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ ರಾಮಮಂದಿರ!

ದೊಡ್ಮನೆ ಕೀರ್ತಿ ಪತಾಕೆಯನ್ನ ಬೆಳ್ಳಿತೆರೆ ಮೇಲೆ ಹಾರಿಸೋಕೆ ಹೊಸ ಹುರುಪು. ಹೊಸ ಟ್ರೆಂಡ್, ಹೊಸ ಕ್ರೇಜ್ ನೊಂದಿಗೆ ಸಜ್ಜಾಗಿದ್ದಾರೆ ಯುವ ರಾಜ್ ಕುಮಾರ್.. ಯುವ ಸಿನಿಮಾ ಇನ್ನೂ ಬಂದಿಲ್ಲ. ಆದ್ರೆ ಇವ್ರು ಹೋದಲ್ಲಿ ಬಂದಲ್ಲಿ ಸೇರೋ ಜನ ನೋಡಿದ್ರೆ ಸಾಕು ಯುವ ಎಂತಹ ಲಕ್ಷ್ಮಿ ಪಟಾಕಿ ಅಂತ ಗೊತ್ತಾಗ್ಬಿಡುತ್ತೆ. ಸಿನಿಮಾ ರಿಲೀಸ್‌ಗೂ ಮೊದಲೇ ಯುವನ ಮೇಲೆ ಆ ಮಟ್ಟದ ಕ್ರೇಜ್ ಇದೆ. ಇದೀಗ ಪಟಾಕಿಗಳ ಬೆಳಕಿನ ಹಬ್ಬ ದೀಪಾವಳಿಯಲ್ಲಿ ದೊಡ್ಮನೆ ಅಭಿಮಾನಿಗಳಿಂದ ಯುವೋತ್ಸವ ನಡೆಯುತ್ತಿದೆ. ಅದಕ್ಕೆ ಕಾರಣ ಯುವರಾಜ್ ಕುಮಾರ್ ಬಳಗದಿಂದ ಸಿಕ್ಕಿರೋ ದೀಪಾವಳಿಯ ಡಬಲ್ ಧಮಾಕದಂತಹ ಸುದ್ದಿ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Video Top Stories