‘ಆದಿಪುರುಷ್’ ರಿಲೀಸ್ ದಿನ ಪ್ರಭಾಸ್ ಫ್ಯಾನ್ಸ್‌ಗೆ ಡಬಲ್ ಧಮಾಕ: ಸಲಾರ್ ಟೀಸರ್ ಮೇಲೆ ಹೆಚ್ಚಾಯ್ತು ಕುತೂಹಲ!
ಪ್ರಶಾಂತ್ ನೀಲ್ ಪ್ರಭಾಸ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ರೆಡಿ ಆಗಿದ್ದಾರೆ. ‘ಸಲಾರ್’ ಸಿನಿಮಾದ ಟೀಸರ್ ‘ಆದಿಪುರುಷ್’ ಸಿನಿಮಾ ಆರಂಭ ಆಗುವುದಕ್ಕೂ ಮೊದಲೂ ಪ್ರದರ್ಶನ ಕಾಣಲಿದೆ.
ಬಣ್ಣದ ಜಗತ್ತು ಸೊರಗಿದೆ. ದೊಡ್ಡ ಸ್ಟಾರ್ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಥಂಡಾ ಹೊಡೆದಿವೆ. ಒಂದಾದ್ರು ಬಿಗ್ ಸ್ಟಾರ್ಸ್ ಸಿನಿಮಾ ಬರ್ಲಪ್ಪಾ ಅಂತ ಪ್ರೇಕ್ಷಕರು ಕಾಯುತ್ತಿದ್ದಾರೆ. ಆ ದಿನ ಕೂಡ ಬಂದೇ ಬಿಟ್ಟಿದೆ. ಈ ಭಾರಿ ನಿಮ್ಮನ್ನ ಸೂಪರ್ ಎಕ್ಸೈಟೆಡ್ ಆಗಿ ಸೀಟ್ ತುದಿ ಕೂರುವಂತೆ ಮಾಡುತ್ತೇನೆ ಅಂತ ಹೇಳ್ತಿದ್ದಾರೆ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್. ಯಾಕಂದ್ರೆ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಜೂನ್ 16ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ವಿಶೇಷ ಅಂದ್ರೆ ಆ ದಿನ ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್ ಡಬಲ್ ಧಮಾಕ ಕಾದಿದೆ. ಅದೇನಪ್ಪಾ ಅಂದ್ರೆ ಆದಿಪುರುಷ್ ಜೊತೆ ಪ್ರಭಾಸ್ ಸಲಾರ್ ಹಿಡಿದು ಬರ್ತಾರಂತೆ.
ಇದನ್ನೂ ವೀಕ್ಷಿಸಿ: ಮಹಾನ್ ನಾಯಕರ ಧ್ವನಿಗೆ ಸಾಕ್ಷಿಯಾಗಿತ್ತು ಈ ಸುಂದರ ಭವನ: 96 ವರ್ಷಗಳ ಸಂಸತ್ ಭವನ ಇಂದಿನಿಂದ ನೆನಪು ಮಾತ್ರ !