Asianet Suvarna News Asianet Suvarna News

ಮಹಾನ್ ನಾಯಕರ ಧ್ವನಿಗೆ ಸಾಕ್ಷಿಯಾಗಿತ್ತು ಈ ಸುಂದರ ಭವನ: 96 ವರ್ಷಗಳ ಸಂಸತ್ ಭವನ ಇಂದಿನಿಂದ ನೆನಪು ಮಾತ್ರ !

ಹಳೆಯ ಸಂಸತ್‌ ಭವನ ದೇಶದ ಪ್ರತಿಷ್ಠಿತ ಕಟ್ಟಡಗಳಲ್ಲೊಂದಾಗಿತ್ತು. ನಮ್ಮ ಸಂಸತ್ ಭವನ ದೇಶದ ಶಕ್ತಿ ಕೇಂದ್ರವಾಗಿತ್ತು. ದೇಶದ ಸಾಕ್ಷಿಪ್ರಜ್ಞೆಯಂತೆ ಸ್ಥಾಯಿಯಾಗಿ ನಿಂತಿದ್ದ, ಈ ಕಟ್ಟಡ ಎಲ್ಲರನ್ನೂ ಒಳಗೊಳ್ಳುವ ದೂರದೃಷ್ಟಿತ್ವದ ಪ್ರತೀಕವಾಗಿತ್ತು.

First Published May 29, 2023, 10:42 AM IST | Last Updated May 29, 2023, 10:42 AM IST

ಈ ಭವನ ‘ಟ್ರಿಸ್ಟ್ ವಿತ್ ಡೆಸ್ಟಿನಿ’ಭಾಷಣಕ್ಕೆ ಸಾಕ್ಷಿಯಾಗಿದೆ.ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆಗಸ್ಟ್ 14ರ ಮಧ್ಯೆ ರಾತ್ರಿ. ಭವನದ ಕಟ್ಟದ ಮೇಲೆ ಧ್ವಜ ಹಾರಿದ್ದು ಸಹ ಮಧ್ಯೆ ರಾತ್ರಿಯಲ್ಲಿಯೇ. ನಂತರ ಈ ಭವನ ಪ್ರತಿ ಕ್ಷಣ ಅವಿಸ್ಮರಣೀಯವಾಗಿತ್ತು. ನಮ್ಮೆಲ್ಲಾರ ಹೆಮ್ಮೆಯ ತ್ರಿವರ್ಣ ಧ್ವಜಕ್ಕೆ ಮೊದಲ ಅರುಣೋದಯವನ್ನು ನೀಡಿದ ಕಟ್ಟಡವಿದೆ. ಈ ಮೂಲಕ ಸೂರ್ಯನಿಗೆ ತ್ರಿವರ್ಣ ಧ್ವಜ ಪರಿಯಿಸಿದ ಸಂಸತ್ ಭವನ. ಆ ಕ್ಷಣದಿಂದ ಭಾರತದ ಏಳಿಗೆಗೆ ಸಾಕ್ಷಿಯಾಗುತ್ತಲೇ ಬಂತು. ಹಾಗೆಯೇ, ಆಗಸ್ಟ್ 15 ರಂದು ಇದೇ ಪಾರ್ಲಿಮೆಂಟ್ ಭವನದಲ್ಲಿ ಟ್ವಿಸ್ಟ್ ವಿತ್ ಡೆಸ್ಟಿನಿ ಅನ್ನೋ ಭಾಷಣ ಮಾಡುತ್ತಾರೆ. ಇದು ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ, ಪಾರ್ಲಿಮೆಂಟ್‌ನಲ್ಲಿ ಮಾಡಿದ ಮೊದಲ ಭಾಷಣ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಅಂದು ಮೊದಲ ಪ್ರಧಾನಿ ಪಂಡಿತ್ ಜವಾಹರ್ಲಾಲ್ ಜೆಹರೂ ಅವರ ಭಾಷಣದಿಂದ, ಅಧೀಕೃತವಾಗಿ ದೇಶ ಸೇವೆಯನ್ನು ಆರಂಭಿಸುತ್ತೆ ಈ ಭವನ. 

ಇದನ್ನೂ ವೀಕ್ಷಿಸಿ: ಸೆಂಗೋಲ್‌ಗೂ ಕರುನಾಡಿನ ಮಠ-ಮಂದಿರಕ್ಕೂ ನಂಟು: ಆ ರಾಜದಂಡಕ್ಕೂ ಈ ಧರ್ಮದಂಡಕ್ಕೂ ಏನು ಸಂಬಂಧ ?

Video Top Stories