ಧೂಳೆಬ್ಬಿಸಿದ ಸಲಾರ್ ಟೀಸರ್!: ಮಹತ್ವದ ಸುಳಿವು ಪತ್ತೆ ಹಚ್ಚಿದ ಫ್ಯಾನ್ಸ್ !
ಸೆಪ್ಟೆಂಬರ್ 28ಕ್ಕೆ ಐದು ಭಾಷೆಯಲ್ಲಿ ದಾಖಲೆಯ ಸ್ಕ್ರೀನ್‌ಗಳಲ್ಲಿ ಸಲಾರ್ ಸಿನಿಮಾ ಬಿಡುಗಡೆಯಾಗಲಿದೆ. ಅಂದ್ರೆ ಸಲಾರ್ ಟೀಸರ್ ಮಾತ್ರ ಪ್ರೇಕ್ಷಕರು ಅಂದುಕೊಂಡತೆ ಬಂದಿಲ್ಲ.
ಕೆಜಿಎಫ್ ನಿರ್ದೇಸಕ ಪ್ರಶಾಂತ್ ನೀಲ್ ( Prashanth Neel) ನಿರ್ದೇಶನದ ಸಲಾರ್ ಸಿನಿಮಾ ಟೀಸರ್ ಬೆಳ್ಳಂ ಬೆಳಗ್ಗೆ 5.12ಕ್ಕೆ ಬೆಚ್ಚಗೆ ಮಲಗಿದ್ದ ಸಿನಿರಸಿಕರ ನಿದ್ದೆಗೆಡಿಸಿ ಸಲಾರ್ ಟೀಸರ್ (Salaar Teaser) ಸೌಂಡ್ ಮಾಡಿದೆ. ಸಲಾರ್ ಟೀಸರ್‌ಗೆ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದ್ದು, ಇದು ಗಂಟೆ ಗಂಟೆಗೂ ಹೆಚ್ಚುತ್ತಿದೆ. ಇಷ್ಟೊಂದು ದೊಡ್ಡ ಹೈಪ್ ಕ್ರಿಯೆಟ್ ಮಾಡೋಕೆ ಸಾಕಷ್ಟು ಕಾರಣಗಳಿವೆ. ಮೊದಲನೇಯದು ಕೆಜಿಎಫ್ ಆದ್ಮೇಲೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾ. ಎರಡನೇಯದು ನೀಲ್ ಡೈರೆಕ್ಷನ್‌ನಲ್ಲಿ ಹೊಂಬಾಳೆ ಪ್ರೊಡಕ್ಷನ್‌ನಲ್ಲಿ (Hombale production) ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟಿಸ್ತಿರೋದು. ಈ ಡೆಡ್ಲಿ ಕಾಂಬಿನೇಷನ್ ಈಗ ಭಾರತೀಯ ಚಿತ್ರರಂಗದ ಟ್ರೆಂಡಿಂಗ್ ಟಾಪಿಕ್ ಆಗಿದೆ. ಸಲಾರ್ ಟೀಸರ್ ನೋಡುತ್ತಿದ್ದಂತೆ ಸಿನಿಪ್ರೇಕ್ಷಕನಿಗೆ ಅನ್ನಿಸಿದ್ದು ಕೆಜಿಎಫ್ (KGF) ಅಧ್ಯಾಯ 2ಕ್ಕೂ ಹಾಗೂ ಸಲಾರ್ ಅಧ್ಯಾಯ ಒಂದಕ್ಕೂ ಸಬಂಧವಿದ್ಯಾ ಅನ್ನೋ ಕುತೂಹಲ. ಹೌದು ಅದಕ್ಕೆ ಕಾರಣ ವೈರಲ್ ಆಗುತ್ತಿರುವ ಈ ಫೋಟೋಗಳು. ‘ಕೆಜಿಎಫ್ 2’ ಸಿನಿಮಾದಲ್ಲಿ ಒಂದಷ್ಟು ಟ್ಯಾಂಕರ್ಗಳು ಕಂಡಿದ್ದವು. ಆ ಪೈಕಿ ಒಂದು ಟ್ಯಾಂಕರ್ ಹೆಸರು ‘ಸಿ-516’. ‘ಸಲಾರ್’ ಸಿನಿಮಾದಲ್ಲೂ ಅದೇ ನಂಬರ್‌ನ ಟ್ಯಾಂಕರ್ ಕಾಣಿಸಿದೆ. ಹೀಗಾಗಿ, ‘ಕೆಜಿಎಫ್ 2’ ಚಿತ್ರದ ಮುಂದುವರಿದ ಭಾಗದ ರೀತಿಯಲ್ಲಿ ‘ಸಲಾರ್’ ಸಿನಿಮಾ ಮೂಡಿಬರಲಿದೆ ಎಂದು ಅನೇಕರು ಭಾವಿಸಿದ್ದಾರೆ.
ಇದನ್ನೂ ವೀಕ್ಷಿಸಿ: ವಿಧಾನಸಭೆಯಲ್ಲಿ ಸಿದ್ದು Vs ದಳಪತಿ ಮಾತಿನ ಮಲ್ಲಯುದ್ಧ..!: "ನಾವೇನು ನಿಮ್ಮ ಮುಲಾಜಿನಲ್ಲಿಲ್ಲ" ಹೆಚ್‌ಡಿಕೆ ಕೌಂಟರ್