ವಿಧಾನಸಭೆಯಲ್ಲಿ ಸಿದ್ದು Vs ದಳಪತಿ ಮಾತಿನ ಮಲ್ಲಯುದ್ಧ..!: "ನಾವೇನು ನಿಮ್ಮ ಮುಲಾಜಿನಲ್ಲಿಲ್ಲ" ಹೆಚ್‌ಡಿಕೆ ಕೌಂಟರ್

ಸಿಎಂ Vs ಮಾಜಿ ಸಿಎಂ ಕಾಳಗದ ಹಿಂದೆ ಮಂಡ್ಯ ಮಹಾಯುದ್ಧ..!
KSRTC ಡ್ರೈವರ್ ಆತ್ಮಹತ್ಯೆ ಯತ್ನ ಕೇಸ್‌ನಲ್ಲಿ ಭುಗಿಲೆದ್ದ ರಾಜಕೀಯ
ಮಂಡ್ಯದಲ್ಲಿ ಅಸ್ತಿತ್ವ ಅಲುಗಾಡಿಸಿದವರ ವಿರುದ್ಧ ಎಚ್‌ಡಿಕೆ ಯುದ್ಧ..!

First Published Jul 7, 2023, 11:59 AM IST | Last Updated Jul 7, 2023, 12:00 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (Kumaraswamy) ಮಧ್ಯೆ ವಿಧಾನಸಭೆಯಲ್ಲಿ ರಣರೋಚಕ ಕಾಳಗವೇ ನಡೆದು ಹೋಯ್ತು. ಒಬ್ಬರಿಗೊಬ್ಬರು ಹಿಗ್ಗಾಮುಗ್ಗಾ ಬೈದಾಡಿಕೊಂಡ್ರು. ವಿಧಾನಸಭಾ ಅಧಿವೇಶನ (Assembly session)  ಶುರುವಾದ ದಿನದಿಂದ್ಲೇ ಸರ್ಕಾರದ ವಿರುದ್ಧ ಮುಗಿ ಬಿದ್ದಿರೋ ದಳಪತಿ ಕುಮಾರಸ್ವಾಮಿ, ಗುರುವಾರ ಸದನದಲ್ಲೇ ಜಟಾಪಟಿಗೆ ನಿಂತ್ರು. ಎಚ್ಡಿಕೆ ಸವಾಲಿಗೆ ತೊಡೆ ತಟ್ಟಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವೇನು ಕಮ್ಮಿ ಅನ್ನೋ ರೀತಿಯಲ್ಲಿ ಅಕ್ಷರಶಃ ಆರ್ಭಟಿಸಿದ್ರು. ಮಂಡ್ಯ(Mandya) ಅಂದ್ರೆ ರಾಜ್ಯ ರಾಜಕಾರಣದಲ್ಲಿ ಯಾವಾಗ್ಲೂ ಒಂದು ಸಂಚಲನ. ಸಕ್ಕರೆ ನಾಡು ಮಂಡ್ಯ ರಣ ರಣ ರಾಜಕಾರಣಕ್ಕೆ ಹೆಸರುವಾಸಿ. ಮಂಡ್ಯ ಮಣ್ಣಿನ ಕಣಕಣದಲ್ಲೂ ರಾಜಕೀಯವಿದೆ, ಮನೆ ಮನೆಯಲ್ಲೂ ರಾಜಕೀಯದ ಗಾಳಿಯಿದೆ. ಮಂಡ್ಯ ಮಣ್ಣಿನಿಂದ ಎದ್ದು ಬಂದು ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದವರು ಒಬ್ರಲ್ಲ ಇಬ್ರಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಎದ್ದು ಬಂದದ್ದೂ ಇಲ್ಲಿಂದ್ಲೇ, ರೆಬೆಲ್ ಸ್ಟಾರ್ ಅಂಬರೀಶ್ ಅಬ್ಬರಿಸಿದ್ಲೂ ಮಂಡ್ಯದಿಂದ್ಲೇ.. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕಾವೇರಿ ಹೋರಾಟದ ಕೇಂದ್ರಸ್ಥಾನವಾಗಿದ್ದು, ದಳಪತಿಗಳನ್ನು ಮಟ್ಟ ಹಾಕಿ ರೆಬೆಲ್ ಲೇಡಿ ಸುಮಲತಾ ಅಂಬರೀಶ್ ಲೋಕಸಭೆಗೆ ಎಂಟ್ರಿ ಕೊಟ್ಟದ್ದೂ ಮಂಡ್ಯ ಮಣ್ಣಿನಿಂದ್ಲೇ.

ಇದನ್ನೂ ವೀಕ್ಷಿಸಿ:  Karnataka Budget 2023-24: ವಾಣಿಜ್ಯ, ಅಬಕಾರಿ ಶುಲ್ಕ, ಆಸ್ತಿ, ವೃತ್ತಿಪರ ತೆರಿಗೆ ಹೆಚ್ಚಳ ಸಾಧ್ಯತೆ ?

Video Top Stories