ಮೂರು ಸೋಲು ಡಾರ್ಲಿಂಗ್ ಪ್ರಭಾಸ್ ಕಂಗಾಲು..! ನಟನ ಕೈ ಹಿಡಿದೇ ಬಿಟ್ರು ವಿಜಯ್ ಕಿರಗಂದುರ್!

ಸೋಲು ಸೋಲು.. ಅಯ್ಯೊಯ್ಯೋ ಬಾಹುಬಲಿಗೆ ಮೂರು ಯುದ್ಧದಲ್ಲೂ ಸೋಲು ಅಂತ ಉತ್ತರದಿಂದ ದಕ್ಷಿಣದವರೆಗೂ ತಮಟೆ ಹೊಡೆದು ಹೇಳಿತ್ತು ಬಾಕ್ಸಾಫೀಸ್. ಇದ್ರಿಂದ ಪ್ರಬಾಸ್ ಆಗಿದ್ರು ಕಂಗಾಲು. ಆದ್ರೆ ಈಗ ಡಾರ್ಲಿಂಗ್ ಕೈ ಹಿಡಿದು ಎತ್ತಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದುರ್. 
 

First Published Sep 15, 2023, 9:06 AM IST | Last Updated Sep 15, 2023, 9:06 AM IST

ಪ್ರಭಾಸ್ ಒಂದ್ ಟೈಮ್ನಲ್ಲಿ ಟಾಲಿವುಡ್ನಲ್ಲಿ ಐರೆನ್ ಲೆಗ್  ಅನಿಸಿಕೊಂಡವ್ರು. ಆದ್ರೆ ಪ್ರಭಾಸ್ ಬಾಕ್ಸಾಫೀಸ್ನಲ್ಲಿ ರೆಬೆಲ್ ಆಗಿದ್ದು ಬಾಹುಬಲಿ ಸೀರಿಸ್‌ನಲ್ಲಿ. ಆದ್ರೇನಂತೆ. ನೆಕ್ಟ್ಸ್ ಬಂದ ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಸಿನಿಮಾಗಳು ಕೂಡ ಡಾರ್ಲಿಂಗ್ ನರೀಕ್ಷೆಗೆ ಕೈ ಕೊಟ್ಟಿದ್ವು. ಇದ್ರಿಂದ ಪ್ರಭಾಸ್(Prabhas) ಆಗಿದ್ರು ಕಂಗಾಲು. ಆದ್ರೆ ಈ ಆಧುನಿಕ ಯುಗದ ರಾಮನನ್ನ ಕೈ ಹಿಡಿದು ಎತ್ತಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದುರ್(Vijay Kirgandur). ಹ್ಯಾಟ್ರಿಕ್ ಸೋಲಿನ ಸರದಾರ ಪ್ರಭಾಸ್ ಮತ್ತೆ ಸಕ್ಸಸ್ ಟ್ರ್ಯಾಕ್‌ಗೆ ಬಂದಿದ್ದಾರೆ. ಅದಕ್ಕೆ ಕಾರಣ ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್(Prashanth Neel) ಸೃಷ್ಟಿಸಿರೋ ಸಲಾರ್. ಈ ಸಿನಿಮಾ ಟಾಲಿವುಡ್ ಡಾರ್ಲಿಂಗ್ ಸಿನಿ ಖರಿಯರ್‌ಗೆ ಅಕ್ಷಯ ಪಾತ್ರೆಯಂತೆ ಕಾಣ್ತಿದೆ. ಭಾರತೀಯ ಚಿತ್ರರಂಗದ ಅಲ್ಟಿಮೇಟ್ ಡೈರೆಕ್ಟರ್ ರಾಜಮೌಳಿ ಬತ್ತಳಿಕೆಯಿಂದ ಬಂದ ಆರ್‌ಆರ್‌ಆರ್ ಪ್ರೀ ರಿಲೀಸ್ ಬ್ಯುಸಿನೆಸ್‌ನಲ್ಲಿ 320 ಕೋಟಿ ಗಳಿಸಿ ಇತಿಹಾಸ ಬರೆದಿತ್ತು. ಈ ರೆಕಾರ್ಡ್ ಬ್ರೇಕ್ ಮಾಡೋಕೆ ಮತ್ತೆ ರಾಜಮೌಳಿಯೇ ಬರಬೇಕು ಅಂತ ಎಲ್ರು ಹೇಳಿದ್ರೆ. ಆದ್ರೆ ನೋವೆ ಚಾನ್ಸೆ ಇಲ್ಲ. ನಾನ್ ಇದ್ದೇನೆ ಅಂತ ಹೇಳಿದ್ದಾರೆ ಪ್ರಭಾಸ್. ಡಾರ್ಲಿಂಗ್ ನಟನೆಯ ಸಲಾರ್(Salaar) ಸಿನಿಮಾ  ಪ್ರೀ ರಿಲೀಸ್ ಬ್ಯುಸಿನೆಸ್ನಲ್ಲಿ 350 ಕೋಟಿ ಗಳಿಸಿದೆ. ಅಷ್ಟೇ ಅಲ್ಲ ಶಾರುಖ್‌ರ ಜವಾನ್ 250 ಕೋಟಿ, ಆದಿಪುರುಷ್ 240 ಕೋಟಿ, ಸಾಹೋ220 ಕೋಟಿ, ಪಠಾಣ್ 225 ಕೋಟಿ, ರಾಧೆ ಶ್ಯಾಮ್ 200 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿ ರೆಕಾರ್ಡ್ ಸೃಷ್ಟಿಸಿದ್ವು. ಆದ್ರೆ ಸಲಾರ್ ಆ ಎಲ್ಲಾ ಸಿನಿಮಗಳನ್ನ ಮೂರಿಸಿ ಟಾಪ್ನಲ್ಲಿ ಬಂದಿದೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದಿನಿಂದ ಭಾದ್ರಪದ ಮಾಸ ಪ್ರಾರಂಭ: ಮೇಷದಿಂದ ಮೀನ- ಯಾವ ರಾಶಿಯವರಿಗೆ ಏನುಫಲ..?