ಗಲ್ಲಿ ಗಲ್ಲಿಯಲ್ಲೂ ಬ್ಯಾಡ್ ಬಾಯ್ಸ್ ಸೌಂಡ್! 'ಭೀಮ'ನ ಎರಡನೇ ಹಾಡಿಗೆ ಭರ್ಜರಿ ತಯಾರಿ !

ಪ್ರತಿ ಸಿನಿಮಾಗೂ ಡಿಫ್ರೆಂಟ್ ಆಗಿ ತೆರೆ ಮೇಲೆ ಅಪ್ರೋಚ್ ಮಾಡೋ ವಿಜಯ್ ಕಟ್ಟು ಮಸ್ತಾಗಿ ಕಾಣೋಕೆ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ. ಅದಕ್ಕಾಗಿ ಮನೆಯಲ್ಲೆ ಜಿಮ್ ಮಾಡ್ತಾ ಬೆವರು ಹರಿಸ್ತಾರೆ. ಈಗ ಭೀಮನಲ್ಲೂ ಕಟ್ಟು ಮಸ್ತಾಗಿ ರೆಡಿಯಾಗಿದ್ದು, ಸಿಕ್ಸ್ ಪ್ಯಾಕ್ ಮಾಡಿದ್ದಾರೆ ವಿಜಯ್.
 

First Published Oct 14, 2023, 9:30 AM IST | Last Updated Oct 14, 2023, 9:30 AM IST

ಈಗ ಗಲ್ಲಿ ಗಲ್ಲಿಯಲ್ಲೂ ಭೀಮನ ಬ್ಯಾಡ್ ಬಾಯ್ ಸೌಂಡ್ ಇದೆ. ಈ ಬ್ಯಾಡ್‌ಬಾಯ್ ಆಲ್ ಇಂಡಿಯಾ ಟ್ರೆಂಡ್ ಆಗಿದೆ. ಭೀಮನ ಈ ಸಾಂಗ್ ಹಾವಳಿಕೆ ವಿಜಯ್ ಫ್ಯಾನ್ಸ್ ಸೈಕ್ ಆಗಿದ್ದಾರೆ. ದುನಿಯಾ ವಿಜಯ್(Duniya Vijay) ಸಿನಿಮಾಗಳೇ ಹಾಗೆ. ಡಿಫ್ರೆಂಟ್ ಹಾಡುಗಳಿಗೆ ಹೆಸರು ವಾಸಿ. ಸಲಗದಲ್ಲಿ ಸಿದ್ಧಿ ಮಹಿಳೆಯರಿಂದ ಸಾಂಗ್ ಹಾಡಿಸಿ ಬೆಂಗಳೂರು ತೋರಿಸಿದ್ರು ವಿಜಯ್. ಅಷ್ಟೆ ಅಲ್ಲ ಇದೇ ಸಲಗದಲ್ಲಿ ಮಳೆಯೇ ಮಳೆಯೇ ಅಂತ ಸಂಜನಾ ಆನಂದ್ ಜೊತೆ ರೊಮ್ಯಾನ್ಸ್ ಕೂಡ ಮಾಡಿದ್ರು. ಈಗ ಒನ್ಸ್ ಅಗೈನ್ ಭೀಮಲ್ಲೂ ಲವ್ ಟ್ರ್ಯಾಕ್ ಇಟ್ಟಿದ್ದಾರೆ. ಪಕ್ಕಾ ಲೋಕಲ್ ಸೈಕ್ ಸಾಂಗ್ ಕೊಟ್ಟಿರೋ ವಿಜಯ್ ಮತ್ತೊಂದು ರೊಮ್ಯಾಂಟಿಕ್ ಹಾಡಿಗೆ (Romantic Song) ರೆಡಿಯಾಗ್ತಿದ್ದಾರೆ. ಅದು ಅಟ್ಟು ಮಸ್ತು ದೇಹ ಹುರಿಗೊಳಿ ಸಿಕ್ಸ್ ಪ್ಯಾಕ್ ವಿಜಯ್ ಆಗಿದ್ದಾರೆ. ಭೀಮಾ(Bhima movie).. ಮಾಸ್ ಕಾರಾ ಬಾತ್.. ಪಕ್ಕಾ ಲೋಕಲ್ ಬಿರಿಯಾನಿ. ಆದ್ರೆ  ಇಲ್ಲೂ ಲವ್, ರೊಮ್ಯಾನ್ಸ್ ಇದೆ. ನಟಿ ಅಶ್ವಿನಿ ಜೊತೆ ವಿಜಯ್ ರೊಮ್ಯಾನ್ಸ್ ಮಾಡ್ತಾರೆ. ದುನಿಯಾ ವಿಜಯ್ಗೆ ಈಗ 49 ವರ್ಷ ವಯಸ್ಸು. ಈ ವಯಸ್ಸಲ್ಲು ಸಿಕ್ಸ್ ಪ್ಯಾಕ್ ಮಾಡ್ಬಹುದು ಅಂತ ತೋರಿಸಿದ್ದಾರೆ. ಹಾಗ್ ನೋಡಿದ್ರೆ ವಿಜಯ್ ಸಿಕ್ಸ್ ಪ್ಯಾಕ್ ಮಾಡಿದ್ದು ಇದೇ ಮೊದಲೇನಲ್ಲ ಬಿಡಿ. ಆಲ್ ಮೋಸ್ಟ್ ವಿಜಯ್ ಎಲ್ಲಾ ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಹಾರರ್ ಥ್ರಿಲ್ಲರ್ ಆಕ್ಷನ್ ಸಿನಿಮಾ ಮಾರಕಾಸ್ತ್ರ: ಈ ಸಿನಿಮಾ ಹುಟ್ಟಿಕೊಂಡಿದ್ದು ಹೇಗೆ ?