ಹಾರರ್ ಥ್ರಿಲ್ಲರ್ ಆಕ್ಷನ್ ಸಿನಿಮಾ ಮಾರಕಾಸ್ತ್ರ: ಈ ಸಿನಿಮಾ ಹುಟ್ಟಿಕೊಂಡಿದ್ದು ಹೇಗೆ ?

ಖಡಕ್ ಪೊಲೀಸ್ ಪಾತ್ರದಲ್ಲಿ ಮಾಲಾಶ್ರೀ ನಟನೆ
ಕ್ರೈಮ್ ರಿಪೋರ್ಟರ್ ಆಗಿ ಹರ್ಷಿಕಾ ಪೂರ್ಣಚ್ಚ 
ಮಾರಕಾಸ್ತ್ರ ಸಿನಿಮಾ ನಿನ್ನೆ ರಾಜ್ಯಾದ್ಯಂತ ತೆರೆಗೆ

Share this Video
  • FB
  • Linkdin
  • Whatsapp

ನಟಿ ಮಾಲಾಶ್ರೀ ನಟನೆಯ ಹಾರರ್‌ ಥ್ರಿಲ್ಲರ್ ಆಕ್ಷನ್‌ ಸಿನಿಮಾ ಮಾರಕಾಸ್ತ್ರ(Marakastra) ರಿಲೀಸ್ ಆಗಿದೆ. ಈ ಸಿನಿಮಾವನ್ನು ಗುರುಮೂರ್ತಿ ಸುನಾಮಿ ನಿರ್ದೇಶನ ಮಾಡಿದ್ದು, ಮಾಲಾಶ್ರೀ(Malashri) ಪ್ರಮುಖ ಪಾತ್ರದಲ್ಲಿ ನಡೆಸಿದ್ದಾರೆ. ಇಲ್ಲಿ ಅವರು ಖಡಕ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಕ್ರೈಮ್‌ ರಿಪೋರ್ಟರ್‌ ಆಗಿ ನಟಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಅಪ್ಪೂರಂತೆ ಕಾಣೋ ಆನಂದ್ ಆರ್ಯ ಚಿತ್ರದ ನಾಯಕರಾಗಿದ್ದಾರೆ. ಖಳನಟರಾಗಿ ಮೈಕೊ ನಾಗರಾಜ್ , ಅಯ್ಯಪ್ಪ, ಶಶಿಧರ್ ಗೌಡ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಂಜು ಕವಿ ಸಂಗೀತ ನೀಡಿದ್ದು, ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ. ಕೋಮಲ್ ನಟರಾಜ್‌ ಅವರು ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಮಹಾಲಯ ಅಮಾವಾಸ್ಯೆ ಇದ್ದು, ಪಿತೃಗಳ ಸ್ಮರಣೆಯಿಂದ ಏನೆಲ್ಲಾ ಫಲ ಸಿಗಲಿದೆ ಗೊತ್ತಾ..?

Related Video