ಯಶ್ ಸ್ಟಾರ್ ಆಗೋ ಮೊದಲು ಹೇಗಿದ್ರು ? ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್‌ ಕಟ್ಟೆಯಲ್ಲೇ ರಾತ್ರಿ ಕಳೆದಿದ್ದ ರಾಕಿಂಗ್‌ಸ್ಟಾರ್‌ !

ಒಂದೇ ಒಂದು ಸಿನೆಮಾ ಸೂಪರ್-ಡೂಪರ್ ಹಿಟ್ ಆದ್ರೆ ಸಾಕು. ನಟನೊಬ್ಬನ ಲೈಫೇ ಏಕ್ದಂ ಚೆಂಜ್ ಆಗ್ಹೋಗಿರುತ್ತೆ. ಆದರೆ ಸ್ಟಾರ್‌ನಟರ ಹಿಸ್ಟರ್ ಕೊಂಚ ರಿವೈಡ್ ಮಾಡಿ ನೋಡಿದ್ರೆ ಅಲ್ಲಿ ಗೊತ್ತಾಗೋ ಕೆಲ ಇಂಟ್ರಸ್ಟಿಂಗ್ ವಿಚಾರ ಎಂಥವರನ್ನೂ ಕೂಡ ಶಾಕ್ ಮಾಡುತ್ತೆ. ಅಸಲಿಗೆ ಕೆಲ ಸ್ಟಾರ್ಸ್, ಸಿನೆಮಾ ತೆರೆಯ ಮೇಲೆ ಮಿಂಚೊ ಮೊದಲು, ಅವರು ಮಾಡ್ತಿದ್ದ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 

Share this Video
  • FB
  • Linkdin
  • Whatsapp

ಎಸ್. ರಾಕಿಂಗ್‌ಸ್ಟಾರ್‌ ಯಶ್ ಇವತ್ತು ಯಾರಿಗೆ ಗೊತ್ತಿಲ್ಲ ಹೇಳಿ. ಸಿನೆಮಾ ಇಂಡ್ರಸ್ಟ್ರಿಯಲ್ಲೇ ಧೂಳೆಬ್ಬಿಸಿದವರು. ಇಂದು ಇವರ ಬಳಿ ಏನಿದೆ ಏನಿಲ್ಲ. ಇದೆಲ್ಲ ಇವರು ಹಗಲು ರಾತ್ರಿ ಪಟ್ಟ ಶ್ರಮದ ಎಫೆಕ್ಟ್. ಹೌದು, ನಟ ಯಶ್(Yash) ಇಂದು ಈ ಮಟ್ಟಿಗೆ ಬೆಳೆದಿರಬಹುದು. ಅದಕ್ಕೂ ಮುಂಚೆ ಕೈಯಲ್ಲಿ ಕಾಸಿಲ್ಲದೇ ಇದ್ದಾಗ, ಇದೇ ಬೆಂಗಳೂರಿನ(Bengaluru) ಮೆಜೆಸ್ಟಿಕ್ ಕಟ್ಟೆಯೇ ಅವರಿಗೆ ಸೋಪಾನ ಆಗಿತ್ತು. ಅಲ್ಲೇ ಕನಸುಗಳನ್ನ ಹೊತ್ತಿಕೊಂಡಿದ್ದ ಕಣ್ಣಿಗೆ, ತುಸು ನಿದ್ರೆ ಆಗ್ತಿದ್ದಿದ್ದು. ಆದರೆ ಇಂದು ಅದೇ ಮೆಜೆಸ್ಟಿಕ್ನಲ್ಲಿರೋ ಸಿನೆಮಾ ಥಿಯೇಟರ್ ಮುಂದೆ, ಯಶ್ ಅವರ ಕಟೌಟ್‌ಗಳನ್ನ ಹಾಕಲಾಗುತ್ತೆ. ಕಾಂತಾರದ ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ(Rishab Shetty) ಕೂಡ ರಾತ್ರೋ ರಾತ್ರಿ ನೇಮ್-ಫೇಮ್ ಪಡೆದವರಲ್ಲ. ಅದಕ್ಕೂ ಮುಂಚೆ ಇವರು ಮಾಡ್ತಿದ್ದಿದ್ದು ಚಿಕ್ಕಪುಟ್ಟ ಪಾತ್ರಗಳನ್ನ ಮಾತ್ರ. ಈಗ ನೀವೆಲ್ಲ ಸ್ಕ್ರೀನ್ನಲ್ಲಿ ನೋಡೋ ರಿಶಬ್ ಶೆಟ್ಟಿಯೂ, ಇಲ್ಲಿ ಕಾಣಿಸ್ತಿರೋ ರಿಶಬ್ಗೂ ಇರೋ ವ್ಯತ್ಯಾಸ ಎಷ್ಟು ಅಂತ. ಇಷ್ಟೆ ಅಲ್ಲ ಕಣ್ರೀ ಇವರು ಸಿನೆಮಾ ಇಂಡ್ರಸ್ಟಿಯಲ್ಲಿ ಕಾಲಿಟ್ಟಾಗ ಜೇಬು ಖಾಲಿ-ಖಾಲಿ ಅನ್ನಿಸಿದಾಗಿಲ್ಲ ಇವರು ಕಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿದ್ದಾರೆ ಜೊತೆಗೆ ವಾಟರ್ಕ್ಯಾನ್ಗಳನ್ನ ಕೂಡ ಹಾಕೋ ಕೆಲಸ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಹನುಮ ಭಕ್ತನಾಗಿ ಆರ್ಭಟಿಸಿದ ಆ್ಯಕ್ಷನ್ ಪ್ರಿನ್ಸ್! ಭರ್ಜರಿಯಾಗಿದೆ ಬಹದ್ದೂರ್ ಹುಡುಗನ ಬರ್ತ್ ಡೇ ಸಿಡಿಪಿ !

Related Video