ಹನುಮ ಭಕ್ತನಾಗಿ ಆರ್ಭಟಿಸಿದ ಆ್ಯಕ್ಷನ್ ಪ್ರಿನ್ಸ್! ಭರ್ಜರಿಯಾಗಿದೆ ಬಹದ್ದೂರ್ ಹುಡುಗನ ಬರ್ತ್ ಡೇ ಸಿಡಿಪಿ !

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಡೈಲಾಗ್ ಅಂದ್ರೆ ಡಾನ್ಸ್ ಅಂದ್ರೆ ಸ್ಯಾಂಡಲ್‌ವುಡ್ ಯಂಗ್ ಹೀರೋಗಳಲ್ಲಿ ನೆನಪಾಗೋದೆ  ಧ್ರುವ ಸರ್ಜಾ. ಹುಟ್ಟು ಹಬ್ಬಕ್ಕೆ ಮಾರ್ಟಿನ್ ಹನುಮ ಭಕ್ತನಾಗಿ ಆರ್ಭಟಿಸಿದ್ದಾರೆ. ಬರ್ತ್ ಡೇ ಸಿಡಿಪಿ ಫುಲ್ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಇತ್ತೀಚೆಗಷ್ಟೆ ಧ್ರುವ ಸರ್ಜಾ ಎರಡನೇ ಮಗುವಿನ ತಂದೆಯಾಗಿದ್ದಾರೆ. ಮಗ ಮಗಳೊಂದಿಗೆ ಧ್ರುವ ಸರ್ಜಾ(Dhruva Sarja) ಈ ಬಾರಿ ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅಣ್ಣ ಚಿರು ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್(RajaMarthanda Release) ಆಗುತ್ತಿದ್ದು. ಇಡೀ ಸರ್ಜಾ ಕುಟುಂಬ ಚಿರು ಕೊನೆ ಸಿನಿಮಾನ ಬಿಗ್ ಸ್ಕ್ರೀನಲ್ಲಿ ನೋಡುತ್ತಾ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಧ್ರುವ ಬರ್ತ್ ಡೆ ಸಿಡಿಪಿ ರಿಲೀಸ್(CDP release) ಆಗಿದ್ದು ಹನುಮ ಭಕ್ತನಾಗಿ ಸಿಡಿಪಿಯಲ್ಲಿ ಆರ್ಭಟಿಸಿದ್ದಾರೆ. ಸರ್ಜಾ ಕುಟುಂಬದ ಮನೆ ದೇವರು ಆಂಜನೇಯ. ಯಾವಾಗ ಮಾತನಾಡಿದರೂ ಧ್ರುವ ಮಾತು ಕೊನೆಯಾಗೋದೆ ಜೈ ಆಂಜನೇಯ ಎಂದು ಹೇಳುವ ಮೂಲಕ. ಆಂಜನೇಯ ಆಶೀರ್ವಾದದೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿರೋ ಸಲುವಾಗಿ ಆಂಜನೇಯನ ಮುಂದೆ ನಿಂತಿರುವ ಮಾರ್ಟಿನ್ ಧ್ರುವ ಎಂದು ಫೋಟೋ ಡಿಜೈಯನ್ ಮಾಡಲಾಗಿದೆ. ಅಂದಹಾಗೆ ಮಾರ್ಟಿನ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದ್ದೂರಿ ಸಿನಿಮಾ ನಿರ್ದೇಶಿಸಿದ್ದ ಎಪಿ ಆರ್ಜುನ್ ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್ ಸಿನಿಮಾವನ್ನು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ 5 ಭಾಷೆಗಳ್ಲಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ಮಾಡುತ್ತಿದ್ದಾರೆ ನಿರ್ಮಾಪಕ ಉದಯ್ ಮೆಹ್ತ. ಇನ್ನು ಧ್ರುವ ಸದ್ಯ ಕೆಡಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಜಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಬೆಳಗಾವಿ ರವಿ ಪೂಜಾರಿ

Related Video