Asianet Suvarna News Asianet Suvarna News

ಸಿಲಿಕಾನ್‌ ಸಿಟಿ ಈಗ ಸೇಫ್‌ ಸಿಟಿ: ಜನರ ರಕ್ಷಣೆಗೆ ಬಂತು ಎಮರ್ಜೆನ್ಸಿ ಸೇವೆ, ಹೇಗೆ ಕಾರ್ಯನಿರ್ವಹಿಸುತ್ತೆ ?

ಸಿಲಿಕಾನ್‌ ಸಿಟಿ ಜನರ ರಕ್ಷಣೆಗೆ ಎಮರ್ಜೆನಿ ಸೇವೆ ಬಂದಿದೆ. ಒಂದು ಬಟನ್‌ ಒತ್ತುವ ಮೂಲಕ ಜನತೆ ಪೊಲೀಸರಿಗೆ ತಮ್ಮ ತೊಂದೆಯನ್ನು ಹೇಳಬಹುದಾಗಿದೆ.  

First Published Jun 19, 2023, 12:43 PM IST | Last Updated Jun 19, 2023, 12:43 PM IST

ಬೆಂಗಳೂರು: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿಯತ್ತ ಬದಲಾವಣೆ ಆಗುತ್ತಿದೆ. ಜನರ ರಕ್ಷಣೆಗೆಂದು ಎಮರ್ಜೆನ್ಸಿ ಸೇವೆಯನ್ನು ಜಾರಿಗೆ ತರಲಾಗುತ್ತಿದೆ. ಈ ಮೂಲಕ ನಗರ ವಾಸಿಗಳ ರಕ್ಷಣೆಗೆ ಸಿಲಿಕಾನ್ ಸಿಟಿ ಪೊಲೀಸರು ಹೊಸ ಪ್ಲ್ಯಾನ್‌ ಮಾಡಿದ್ದಾರೆ. ಇದರಿಂದ ಜನ ತಮ್ಮ ಬೆರಳ ತುದಿಯಲ್ಲೇ ರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ. ಈ ಒಂದು ಸೇವೆಯ ಮೂಲಕ ನಿಂತ ಸ್ಥಳದಲ್ಲೇ ಮಾಹಿತಿ ನೀಡಬಹುದಾಗಿದೆ. ಅಲ್ಲಿ ಇರುವ ಒಂದು ಬಟನ್‌ ಪ್ರೆಸ್‌ ಮಾಡಿದ್ರೆ, ನಿಮ್ಮ ಸುತ್ತಮುತ್ತ ವಿಡಿಯೋ ಸಮೇತ ರೆಕಾರ್ಡ್‌ ಆಗಲಿದೆ. ಕರೆ ಮಾಡಿದಾಗ ನೇರವಾಗಿ ಕಮಾಂಡ್‌ ಸೆಂಟರ್‌ಗೆ ಕರೆ ಹೋಗಲಿದೆ.ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ  ನೀಡಿ, 7 ನಿಮಿಷಕ್ಕೆ ನಿಮ್ಮ ಮುಂದೆ ಹೋಯ್ಸಳ ಪೊಲೀಸರು ಬರಲಿದ್ದಾರೆ. ಮೊಬೈಲ್ ಬಳಕೆ ಇಲ್ಲದವರಿಗೆ ಇದು ಉಪಯೋಗವಾಗಲಿದೆ.

ಇದನ್ನೂ ವೀಕ್ಷಿಸಿ: ನಾಳೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಎಲೆಕ್ಷನ್‌: ಬಿಜೆಪಿಗೆ ಟಕ್ಕರ್‌ ಕೊಡಲು ಜಗದೀಶ್‌ ಶೆಟ್ಟರ್‌ ಪ್ಲ್ಯಾನ್‌